ಬದಿಯಡ್ಕ: ವಿಶ್ವಕರ್ಮ ಸಾಹಿತ್ಯ ದರ್ಶನ ವಾಟ್ಸಾಪ್ ಬಳಗದ ದ್ವಿತೀಯ ವಾರ್ಷಿಕೋತ್ಸವವಾದ ವಿಶ್ವದರ್ಶನ 2019 ಸಾಹಿತ್ಯ ಸಮ್ಮೇಳನದಲ್ಲಿ ಜ.26ಕ್ಕೆ ಅಣುರೇಣು ಎಂಬ ಚುಟುಕು ಹನಿಗವನದ ಸಂಪಾದಿತ ಕೃತಿ ಬಿಡುಗಡೆಗೊಳ್ಳಲಿದೆ.
ಈ ಬಳಗದ ಸುಮಾರು 40 ಕವಿ, ಕವಯತ್ರಿಯರ ಸುಮಾರು 300ಕ್ಕಿಂತಲೂ ಅಧಿಕ ಚುಟುಕು ಹನಿಗಳ ಸಂಕಲನವನ್ನು ಜಯ ಮಣಿಯಂಪಾರೆ ಸಂಪಾದಿಸಿ ಕೃತಿಯಾಗಿಸಿದ್ದಾರೆ. ಚುಟುಕು ಕವಿ, ಪತ್ರಕರ್ತ ವಿರಾಜ್ ಅಡೂರು ಮುನ್ನುಡಿ ಹಾಗೂ ಹನಿಗವಿ, ಶಿಕ್ಷಕ ಹರೀಶ್ ಸುಲಾಯ ಒಡ್ಡಂಬೆಟ್ಟು ಬೆನ್ನುಡಿ ಬರೆದಿದ್ದಾರೆ. ವಿಶ್ವಕರ್ಮ ಸಾಹಿತ್ಯ ದರ್ಶನದ ಕೃತಿ ದರ್ಶನ ಯೋಜನೆಯಂತೆ ಪ್ರಕಟಿಸಿದ ಈ ಪುಸ್ತಕಕ್ಕೆ ಅನೆಗುಂದಿ ಸಂಸ್ಥಾನದ ಬೆಳಗುತ್ತಿ ಮಠಾಧೀಶರಾದ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳು ಅನುಗ್ರಹ ಸಂದೇಶ ಬರೆದಿದ್ದಾರೆ. ಕೃತಿಯನ್ನು ಜ.26ಕ್ಕೆ ಬದಿಯಡ್ಕದ ಗ್ರಾಂಡ್ ಪ್ಲಾಜಾ ಆಡಿಟೋರಿಯಂನಲ್ಲಿ ಸಾಹಿತ್ಯ, ಧಾರ್ಮಿಕ ಪೋಷಕರಾಗಿರುವ sಶ್ರೀಕೃಷ್ಣ ಶಿವಕೃಪಾ ಬಿಡುಗಡೆಗೊಳಿಸುವರು. ಹೆಚ್ಚಿನ ಸಂಖ್ಯೆಯ ಸಾಹಿತ್ಯಾಸಕ್ತರು ಪಾಲ್ಗೊಂಡು ಸಾಹಿತ್ಯ ಪೂಜನದಲ್ಲಿ ಪಾಲ್ಗೊಳ್ಳಬೇಕೆಂದು ಸಂಘಟಕರು ವಿನಂತಿಸಿದ್ದಾರೆ.