HEALTH TIPS

ಜ.26ರಿಂದ ಜನಪರ ಕಲಿಕೋತ್ಸವ

   
          ಕಾಸರಗೋಡು: ಸಾರ್ವಜನಿಕ ಶಿಕ್ಷಣ ಸಂರಕ್ಷಣೆ ಯಜ್ಞದ ಯೋಜನೆ ಅಂಗವಾಗಿ ಮಕ್ಕಳ ಪ್ರತಿಭೆಗಳನ್ನು ಸಮಾಜದಲ್ಲಿ ಮಂಡಿಸುವ ನಿಟ್ಟಿನಲ್ಲಿ ಜಾರಿಗೊಳಿಸುವ ಜನಪರ ಕಲಿಕೋತ್ಸವಗಳನ್ನು ಎಲ್ಲ ಶಾಲೆಗಳಲ್ಲೂ ನಡೆಸಲಾಗುವುದು.
       ಕಲಿಕೋತ್ಸವ ಸಂಬಂಧ ಶಿಕ್ಷಣ ಅಧಿಕಾರಿಗಳ ಸಭೆ ಮಂಗಳವಾರ ಜರುಗಿತು. ಶಿಕ್ಷಣ ಸಹಾಯಕ ನಿರ್ದೇಶಕ ಡಾ.ಗಿರೀಶ್ ಚೋಲಯಿಲ್ ಉದ್ಘಾಟಿಸಿದರು. ಡಯಟ್ ಪ್ರಾಂಶುಪಾಲ ಕೆ.ಜಯದೇವನ್ ಅಧ್ಯಕ್ಷತೆ ವಹಿಸಿದ್ದರು. 
       ಕಲಿಕೋತ್ಸವಗಳ ಜಿಲ್ಲಾ-ಬಿ.ಆರ್.ಸಿ. ಮಟ್ಟದ ಉದ್ಘಾಟನೆ ಕಾರ್ಯಕ್ರಮಗಳು ಜ.26ರಂದು ನಡೆಯಲಿದೆ. ಜಿಲ್ಲಾ ಮಟ್ಟದ ಉದ್ಘಾಟನೆ ಹೊಸದುರ್ಗ ಯು.ಬಿ.ಎಂ.ಸಿ.ಎ.ಎಲ್.ಪಿ.ಶಾಲೆಯಲ್ಲಿ ನಡೆಯಲಿದ್ದು, ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಕಾ?ಂಗಾಡ್ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್ ಸಹಿತ ಜನಪ್ರತಿನಿಧಿಗಳು, ಜಿಲ್ಲಾ ಶಿಕ್ಷಣ ಇಲಾಖೆಯ ಸಿಬ್ಬಂದಿ ಭಾಗವಹಿಸುವರು.
       ಚೆರುವತ್ತೂರು, ಚಿತ್ತಾರಿಕಲ್, ಬೇಕಲ್,ಕಾಸರಗೋಡು,ಕುಂಬಳೆ, ಮಂಜೇಶ್ವರ ಬಿ.ಆರ್.ಸಿ.ಗಳಲ್ಲಿ ಯಥಾಕ್ರಮ ವಲಿಯಪರಂಬ ಎ.ಎಲ್.ಪಿ.ಶಾಲೆ,ಮೂಕೂಡ್ ಜಿ.ಎಲ್.ಪಿ.ಶಾಲೆ, ತಳಂಗರೆ ಪಡಿಂಞರ್ ಜಿ.ಎಲ್.ಪಿ.ಶಾಲೆ, ಬೇಳ ಜಿ.ಡಬ್ಲ್ಯೂ, ಎಲ್.ಪಿ.ಶಾಲೆ, ಮುಸೋಡಿ ಜಿ.ಎಲ್.ಪಿ.ಶಾಲೆ ಮೊದಲಾದೆಡೆ ಉಪಜಿಲ್ಲಾ ಮಟ್ಟದ ಉದ್ಘಾಟನೆಗಳು ನಡೆಯಲಿವೆ. ಶಾಸಕರು, ಜಿಲ್ಲಾ ಪಂಚಾಯತ್ ಪದಾಧಿಕಾರಿಗಳು, ಸದಸ್ಯರು, ಬ್ಲೋಕ್-ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಜಿಲ್ಲಾ-ಉಪಜಿಲ್ಲಾ ಶಿಕ್ಷಣ ವಿಭಾಗಗಳ ಸಿಬ್ಬಂದಿ, ಶಿಕ್ಷಣ ಪರಿಣತರು ಭಾಗವಹಿಸುವರು.
              ಏನಿದು ಕಲಿಕೋತ್ಸವ?:
     ಕಲಿಕೋತ್ಸವದ ನಿರಂತರ ಚಟುವಟಿಕೆ ರೂಪದಲ್ಲಿ ಜನಪರ ಸಹಭಾಗಿತ್ವದೊಂದಿಗೆ ವ್ಯಾಪಕ ಎನ್ರೋಲ್ ಕ್ಯಾಂಪೇನ್ ಗಳುನಡೆಯಲಿವೆ. ಬೇರೆ ಬೇರೆ ಕಾರಣಗಳಿಂದ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿ ತೆರಳಿದ ಮಕ್ಕಳನ್ನು ಮತ್ತೆ ಕರೆತರುವುದರ ಸಹಿತ ಹೆಚ್ಚುವರಿ ಮಕ್ಕಳನ್ನು ಈ ಶಾಲೆಗಳತ್ತ ಆಕರ್ಷಿತರಾಗುವಂತೆ ಮಾಡುವ ಕಲಿಕೋತ್ಸವ ಜಾರಿಗೊಳ್ಳಲಿದೆ. ಕಲಿಕೋತ್ಸವದಿಂದ ಜೂನ್ ತಿಂಗಳಲ್ಲಿ ನಡೆಯುವ ಶಾಲಾ ಪ್ರವೇಶೋತ್ಸವ ವರೆಗೆ ವ್ಯಾಪಕ ಕ್ಯಾಂಪೇನ್ ಗಳು ಸಾರ್ವಜನಿಕ ವಿದ್ಯಾಲಯಗಳಲ್ಲಿ ನಡೆಯಲಿವೆ ಎಂದು ಸಭೆಯಲ್ಲಿ ತಿಳಿಸಲಾಯಿತು.
    ಸಮಗ್ರ ಶಿಕ್ಷಣ ಜಿಲ್ಲಾ ಪ್ರೋಜೆಕ್ಟ್ ಆಫೀಸರ್ ಪಿ.ಪಿ.ವೇಣುಗೋಪಾಲ್ ಕಾರ್ಯಕ್ರಮಗಳು ಕುರಿತು ಮಾಹಿತಿ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries