ಕುಂಬಳೆ: ಕಾಸರಗೋಡು ಜಿಲ್ಲಾ ಅಗಸರ ಯಾನೆ ಮಡಿವಾಳರ ಸಂಘದ ನೇತೃತ್ವದಲ್ಲಿ ಕುಂಬಳೆ ದೇವಿನಗರ ಮೂಡುಕೆಡೆಂಜಿಯ ಗಟ್ಟಿ ಸಮಾಜ ಸಭಾಭವನದಲ್ಲಿ ಅಗಸರ ಯಾನೆ ಮಡಿವಾಳರ Àಸಮಾಜೋತ್ಸವ ಜ.27 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಅಂದು ಬೆಳಗ್ಗೆ 9 ಕ್ಕೆ ಶಂಕರ ಆರಿಕ್ಕಾಡಿ ಅವರು ಧ್ವಜಾರೋಹಣ ನಡೆಸುವರು. ಸಂಘದ ಅಧ್ಯಕ್ಷ ಸಚ್ಚಿದಾನಂದ ಖಂಡೇರಿ ಅಧ್ಯಕ್ಷತೆ ವಹಿಸುವರು. ಸಾಹಿತಿ, ನಿವೃತ್ತ ಪ್ರಾಂಶುಪಾಲೆ ಪೆÇ್ರ.ಚಂದ್ರಕಲಾ ನಂದಾವರ ಉದ್ಘಾಟಿಸುವರು. ಪ್ರಧಾನ ಕಾರ್ಯದರ್ಶಿ ಸಂಜೀವ ಮಾನ್ಯ ವರದಿ ಮಂಡಿಸುವರು. ಮುಖ್ಯ ಅತಿಥಿಗಳಾಗಿ ಡಾ.ಯತಿರಾಜ್ ಕುಕ್ಕಾಜೆ, ಕೇಶವ ತಲಪಾಡಿ ಭಾಗವಹಿಸುವರು. ವಸಂತ ಪೆರಡಾಲ, ಸುಬ್ಬಣ್ಣ ಬಂಬ್ರಾಣ, ಸದಾಶಿವ ಮುರಿಯಂಕೂಡ್ಲು, ಮೈನಾ ಕುಮಾರಿ ಕುಂಬಳೆ, ಬಾಬು ನೀರ್ಚಾಲು ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಸಮಾಜದ ಹಿರಿಯರಿಗೆ ಗೌರವಾರ್ಪಣೆ, ಸಮ್ಮಾನ, ಕಲಾ ಸಾಂಸ್ಕøತಿಕ ಕಾರ್ಯಕ್ರಮ ಜರಗಲಿದೆ.