ಕಾಸರಗೋಡು: ಆಲಂಪಾಡಿ ವೆಂಕಟೇಶ ಶ್ಯಾನುಭೋಗ್ ಸ್ಮಾರಕ ಸಂಗೀತೋತ್ಸವ ಜ.27 ರಂದು ಮಧ್ಯಾಹ್ನ 2 ಗಂಟೆಯಿಂದ ಎಸ್.ವಿ.ಟಿ. ರಸ್ತೆಯ ವೆಂಕಟೇಶದಲ್ಲಿ ನಡೆಯಲಿದೆ.
ಮಧ್ಯಾಹ್ಯ 2 ಗಂಟೆಗೆ ವಿದ್ಯಾರ್ಥಿಗಳಿಂದ ಸಂಗೀತಾರಾಧನೆ, ಸಂಜೆ 5.30 ಕ್ಕೆ ಕಾರ್ಯಕ್ರಮವನ್ನು ಪೆÇ್ರ.ಅರವಿಂದ ಹೆಬ್ಬಾರ್ ಉಡುಪಿ ಉದ್ಘಾಟಿಸುವರು. ಇದೇ ಸಂದರ್ಭದಲ್ಲಿ ಎವಿಎಸ್ ಪ್ರಶಸ್ತಿಯನ್ನು ವಿದ್ವಾನ್ ಜೇನುಮೂಲೆ ಕೃಷ್ಣ ಭಟ್ ಅವರಿಗೆ ಪ್ರದಾನ ಮಾಡಲಾಗುವುದು. ವೆಂಕಟ್ರಮಣ ಕೂಡ್ಲು ಮತ್ತು ರಾಜೀವಿ ವೆಂಕಟ್ರಮಣ ಅವರನ್ನು ಗೌರವಿಸಲಾಗುವುದು.
ಸಂಜೆ 6 ರಿಂದ ವಿದ್ವಾನ್ ಪಟ್ಟಾಭಿರಾಮ ಪಂಡಿತ್ ಬೆಂಗಳೂರು ಅವರಿಂದ ಸಂಗೀತ ಕಚೇರಿ ನಡೆಯಲಿದೆ. ವಯಲಿನ್‍ನಲ್ಲಿ ವಿದ್ವಾನ್ ವೇಣುಗೋಪಾಲ ಶ್ಯಾನುಭೋಗ, ಮೃದಂಗದಲ್ಲಿ ವಿದ್ವಾನ್ ಡಾ.ಶಂಕರ ರಾಜ್, ಘಟಂನಲ್ಲಿ ವಿದ್ವಾನ್ ಕುರುಚಿತಾನಂ ಆನಂದಕೃಷ್ಣನ್ ಸಹಕರಿಸುವರು.