ಬದಿಯಡ್ಕ: ಮುಂಡಿತ್ತಡ್ಕದ ವಿಷ್ಣು ನಗರದ ಶ್ರೀಮಹಾವಿಷ್ಣು ಭಜನಾ ಸಂಘದ 29ನೇ ವಾರ್ಷಿಕೋತ್ಸವದ ಅಂಗವಾಗಿ ಜರಗುವ ವಿಶೇಷ ಭಜನಾ ಸಂಕೀರ್ತನೆಯನ್ನು ಭಜನಾ ಸಂಘದ ಸ್ಥಾಪಕ ಸದಸ್ಯರಾದ ಸೀತಾರಾಮ ಅರಿಪ್ಪಾದೆ ದೀಪ ಪ್ರಜ್ವಲಿಸುವ ಮೂಲಕ ಭಾನುವಾರ ಚಾಲನೆ ನೀಡಿದರು. ಭಜನಾ ಮಂದಿರದ ಅರ್ಚಕ ಭಾಸ್ಕರ ಬೀರಿಕುಂಜ,ಅಧ್ಯಕ್ಷ ಪದ್ಮನಾಭ ಮುಂಡಿತ್ತಡ್ಕ, ಪ್ರಧಾನ ಕಾರ್ಯದರ್ಶಿ ಮೋಕ್ಷಿತ್ ಹಾಗೂ ಇನ್ನಿತರು ಉಪಸ್ಥಿತರಿದ್ದರು. ಶಾಸ್ತರೇಶ್ವರ ಭಜನಾ ಸಂಘ ಕೀರ್ತೇಶ್ವರ ಮಂಜೇಶ್ವರ ಇವರಿಂದ ಭಜನಾ ಸೇವೆಯು ನಡೆಯಿತು.
ಎರಡನೇ ದಿನವಾದ ಸೋಮವಾರ ಶ್ರೀಅಯ್ಯಪ್ಪ ಭಜನಾ ಸಂಘ ಉಕ್ಕಿನಡ್ಕ ಇವರಿಂದ ಭಜನಾ ಸೇವೆಯು ನಡೆಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು.