ಮಂಜೇಶ್ವರ: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಕಾಸರಗೋಡು ಮತ್ತು ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್‍ನ ಸಹಯೋಗದಲ್ಲಿ ಖ್ಯಾತ ಪತ್ರಕರ್ತ, ಸಾಹಿತ್ಯ, ಸಂಗೀತ, ಯಕ್ಷಗಾನ ಕಲಾ ವಿಮರ್ಶಕರಾದ ದಿ.ಎ.ಈಶ್ವರಯ್ಯ ಸಂಸ್ಮರಣೆ ಕಾರ್ಯಕ್ರಮ ಫೆ.2 ರಂದು ಅಪರಾಹ್ನ 2 ರಿಂದ ಮಂಜೇಶ್ವರದ ರಾಷ್ಟ್ರಕವಿ ಗೋವಿಂದ ಪೈ ಅವರ ನಿವಾಸ `ಗಿಳಿವಿಂಡು' ಆವರಣದಲ್ಲಿ ನಡೆಯಲಿದೆ.
ಸಾಹಿತಿ, ಚಿಂತಕ ಡಾ.ವರದರಾಜ ಚಂದ್ರಗಿರಿ ಸಂಸ್ಮರಣ ಭಾಷಣ ಮಾಡುವರು. ಪರಿಷತ್ ಅಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸುವರು. ಕಲೆ, ವಿಮರ್ಶೆ ಮತ್ತು ಈಶ್ವರಯ್ಯ ನಾನು ಕಂಡಂತೆ ಎಂಬ ಬಗ್ಗೆ ಖ್ಯಾತ ಪಿಟೀಲು ವಾದಕ ಅನಂತಪದ್ಮನಾಭ, ಈಶ್ವರಯ್ಯನವರ ಒಡನಾಟದ ಸವಿನೆನಪುಗಳು ಬಗ್ಗೆ ಸಾಹಿತಿ ಶ್ರೀರಾಂ ಎಲ್ಲಂಗಳ ಮಾತನಾಡುವರು.
ಕಾರ್ಯಕ್ರಮದಲ್ಲಿ ಪರಿಷತ್‍ನ ಗೌರವ ಕಾರ್ಯದರ್ಶಿ ರಾಮಚಂದ್ರ ಭಟ್ ಪಿ, ನವೀನ್‍ಚಂದ್ರ ಎಂ.ಎಸ್, ಪರಿಷತ್ ಕಾರ್ಯಕಾರಿ ಸಮಿತಿ ಸದಸ್ಯ ಸುಬ್ಬಣ್ಣ ಶೆಟ್ಟಿ, ಗಿಳಿವಿಂಡು ಆಡಳಿತಾಧಿಕಾರಿ ಡಾ.ಕಮಲಾಕ್ಷ ಕೆ. ಮೊದಲಾದವರು ಉಪಸ್ಥಿತರಿರುವರು.