ಮಂಜೇಶ್ವರ: ಜೋಡುಕಲ್ಲು ಸಮೀಪದ ಕಜೆ ಶ್ರೀ ಜನಾರ್ಧನ ದೇವಸ್ಥಾನ ಕಯ್ಯಾರು ಕ್ಷೇತ್ರದ ವಾರ್ಷಿಕ ಮಂಡಲ ಪೂಜೆ ಉತ್ಸವದ ಪ್ರಯುಕ್ತ ಜ. 3 ರಂದು ಯುವಭಾರತಿ ಬೊಳಂಪಾಡಿ ಇದರ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ರಾತ್ರಿ ಗಂಟೆ 7ರಿಂದ ಸ್ಥಳೀಯ ಪ್ರತಿಭೆಗಳಿಂದ ಗಾನ ನೃತ್ಯ ವೈವಿಧ್ಯ ಹಾಗೂ ಗಡಿನಾಡ ತುಳು ಸಾಹಿತಿ ಯೋಗೀಶ ರಾವ್ ಚಿಗುರುಪಾದೆ ರಚಿಸಿರುವ ವಿಶಿಷ್ಟ ತುಳು ರೂಪಕ " ಉಳ್ಳಾಲ ರಾಣಿ ಅಬ್ಬಕ್ಕ" "ಮಾಸ್ಟರ್ಸ್ ಮೀಯಪದವು" ತಂಡದ 40 ಗ್ರಾಮೀಣ ಕಲಾಪ್ರತಿಭೆಗಳಿಂದ ಪ್ರದರ್ಶನ ಗೊಳ್ಳಲಿದೆ. ಅಬ್ಬಕ್ಕ ರೂಪಕ ಈಗಾಗಲೇ ಪ್ರದರ್ಶನಗೊಂಡಲ್ಲೆಲ್ಲಾ ವಿದ್ವಾಂಸರಿಂದ ಪ್ರೇಕ್ಷಕರಿಂದ ಮುಕ್ತ ಪ್ರಶಂಸೆಗೊಳಗಾಗಿದ್ದು ತುಳುನಾಡ ರತ್ನ ದಿನೇಶ ಅತ್ತಾವರ ನಿರ್ದೇಶಿಸಿ ಕಂಠದಾನ ಗೈದಿರುವ ರೂಪಕದಲ್ಲಿ ಸುರೇಶ ಶೆಟ್ಟಿ ಜೋಡುಕಲ್ಲು ಅಬ್ಬಕ್ಕನ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಲಿದ್ದಾರೆ.
ಜ.3. ಕಯ್ಯಾರಿನಲ್ಲಿ ರಂಜಿಸಲಿರುವ ಉಳ್ಳಾಲ ರಾಣಿ ಅಬ್ಬಕ್ಕ
0
ಜನವರಿ 02, 2019