ಕರ್ನಾಟಕ ಸಚಿವ ಯು.ಟಿ ಖಾದರ್ ಅವರಿಂದ ಉದ್ಘಾಟನೆ
ಬದಿಯಡ್ಕ: ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯ 150 ನೇ ಜನ್ಮ ಶತಾಬ್ದಿ ವರ್ಷಾಚರಣೆಯಲ್ಲಿ ಗಾಂಧೀಜಿ ಕಂಡ ಭಾರತ ಪ್ರಜ್ವಲಿಸಲಿ, ಗೋಡ್ಸೆ ಚಿಂತನೆ ಮರೆಯಾಗಲಿ ಎಂಬ ಸಂದೇಶದೊಂದಿಗೆ ಸಾಂಸ್ಕøತಿಕ ಸಾಹಿತ್ತಿಕ ವೇದಿಕೆಯು ಕೇರಳ ರಾಜ್ಯದಾದ್ಯಂತ ಸಾಂಸ್ಕøತಿಕ ಯಾತ್ರೆ ಹಮ್ಮಿಕೊಂಡಿದೆ. ವೇದಿಕೆಯ ರಾಜ್ಯ ಅಧ್ಯಕ್ಷ ಅರ್ಯಾಡನ್ ಶೌಕತ್ ಅವರ ನೇತೃತ್ವದಲ್ಲಿ ನಡೆಯುವ ಸಾಂಸ್ಕøತಿಕ ಯಾತ್ರೆಗೆ ಇಂದು ಚಾಲನೆ ಸಿಗಲಿದೆ. ಸಂಜೆ 4 ಕ್ಕೆ ಚೆರ್ಕಳದಲ್ಲಿ ಕರ್ನಾಟಕ ಸಚಿವ ಯು.ಟಿ ಖಾದರ್ ಯಾತ್ರೆಯನ್ನು ಉದ್ಘಾಟಿಸುವರು. ರಾಜ್ಯದ ಪ್ರಮುಖ ಸಾಂಸ್ಕøತಿಕ ನಾಯಕರು ರಾಯಭಾರಿಗಳು ಪಾಲ್ಗೊಳ್ಳಲಿದ್ದಾರೆ.