ಕಾಸರಗೋಡು: ಕಾಂಗ್ರೆಸ್ ಪಕ್ಷದ ಜನಹಿತ ಯಾತ್ರೆಯು ಫೆ.3 ರಂದು ಆರಂಭವಾಗಲಿದೆ. ರಾಜ್ಯ ಸರಕಾರದ ಜನವಿರೋಧಿ ನೀತಿಗೆದುರಾಗಿ ಯಾತ್ರೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಶಾಫಿ ಪರಂಬಿಲ್ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ನಡೆದ ಸಂಘಟಕ ಸಮಿತಿ ರಚನೆ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಜಾತ್ರೆಯ ಮುಂದಾಳುತ್ವ ವಹಿಸಲಿದ್ದಾರೆ. ಫೆ.3 ರಂದು ಮಾಜಿ ಕೇಂದ್ರ ಸಚಿವ ಎ.ಕೆ.ಆಂಟನಿ ಯಾತ್ರೆಯನ್ನು ಉದ್ಘಾಟಿಸಲಿದ್ದು, ಕಲ್ಲ್ಲಗ ಚಂದ್ರಶೇಖರ ರಾವ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಘಟನಾ ಸಮಿತಿ ಸಭೆಯಲ್ಲಿ ಕೆ.ಖಾಲಿದ್, ಡಿ.ಸಿ.ಸಿ. ಅಧ್ಯಕ್ಷ ಹಕೀಂ ಕುನ್ನಿಲ್, ಕೆ.ಪಿ.ಸಿ.ಸಿ. ಕಾರ್ಯದರ್ಶಿ ಕೆ.ನೀಲಕಂಠನ್, ಪಿ.ಎ. ಅಶ್ರಫಾಲಿ, ಬಾಲಕೃಷ್ಣ ವೋರ್ಕೂಡ್ಲು, ಕರುನ್ ತಾಪಾ, ನ್ಯಾಯವಾದಿ ಗೋವಿಂದನ್ ನಾಯರ್, ಎಂ.ಸಿ. ಪ್ರಭಾಕರನ್, ಎಂ.ಕುಞಂಬು ನಂಬ್ಯಾರ್, ಸಿ.ವಿ.ಜೇಮ್ಸ್, ನ್ಯಾಯವಾದಿ ಯು.ಎಸ್ ಬಾಲನ್, ಆರ್.ಗಂಗಾಧರನ್, ಸುಭಾಶ್ ನಾರಾಯಣನ್ ಮೊದಲಾದವರು ಮಾತನಾಡಿದರು.
ಸಂಘಟನಾ ಸಮಿತಿಯ ಅಧ್ಯಕ್ಷರಾಗಿ ಪಿ.ಎ.ಅಶ್ರಫಾಲಿ ಆಯ್ಕೆಯಾಗಿದ್ದಾರೆ, ಸಿ.ವಿ.ಜೇಮ್ಸ್ ಪ್ರಧಾನ ಕಾರ್ಯದರ್ಶಿ, ಕೆ.ವಾರಿಜಾಕ್ಷನ್ ಸಂಯೋಜಕರಾಗಿ, ಬಾಲಕೃಷ್ಣನ್ ವೋರ್ಕೂಡ್ಲು, ಕಲ್ಲಗ ಚಂದ್ರಶೇಖರ ರಾವ್, ಆರ್.ಗಂಗಾಧರನ್, ಜಿ.ನಾರಾಯಣನ್, ಬಿ.ಎ ಇಸ್ಮಾಯಿಲ್, ಆನಂದ ಮವ್ವಾರ್, ಕೆ.ಎನ್.ಕೃಷ್ಣ ಭಟ್ (ಉಪಾಧ್ಯಕ್ಷ), ಎಂ.ಪುರುಷೋತ್ತಮ ನಾಯರ್, ಎಂ.ರಾಜೀವನ್ ನಂಬ್ಯಾರ್, ಕೆ.ರಾಮ ಪಾಟಾಳಿ, ಹನೀಫ್ ಚೆರೆಂಗೈ, ಎ.ಕೆ.ಶಂಕರನ್, ಉಮೇಶ್ ಅಣಂಗೂರು, ಕೆ.ಬಲರಾಮನ್ ನಂಬ್ಯಾರ್, ಕೇಶವ ಬೆಳ್ಳಿಗೆ, ಪಿ.ಕೆ.ಶೆಟ್ಟಿ, ಮನಾಫ್ ನುಳ್ಳಿಪ್ಪಾಡಿ, ಸು„ೀಸ್ ನಂಬ್ಯಾರ್(ಸಂಯೋಜಕರಾಗಿ) ಆಯ್ಕೆಗೊಂಡಿದ್ದಾರೆ.