ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ ಇದರ ಮಾಸಿಕ ಸಭೆ ಹಾಗು ಕಾಸರಗೋಡು ಜಿಲ್ಲಾ ವ್ಯಾಪ್ತಿಯ ಕುಲಾಲ ಸಮಾಜ ಬಾಂಧವರ, ಕುಲಾಲ ಸಮಾಜದ ತರವಾಡು ಕುಟುಂಬದ ಆಡಳಿತ ಸಮಿತಿ ಸದಸ್ಯರ ಸಮಾವೇಶ ಫೆ.3 ರಂದು ಅಪರಾಹ್ನ 3 ಗಂಟೆಗೆ ಹೊಸಬೆಟ್ಟು ಕುಲಾಲ ಸಮಾಜ ಮಂದಿರದಲ್ಲಿ ಜರಗಲಿದೆ.
ಎಲ್ಲಾ ಕುಲಾಲ ಪಂಚಾಯತಿ ಶಾಖೆಗಳ ಪದಾಧಿಕಾರಿಗಳು, ಮಹಿಳಾ ಘಟಕದ ಸದಸ್ಯರು, ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಸಂಘದ ಅಧ್ಯಕ್ಷ ರವೀಂದ್ರ ಮುನ್ನಿಪ್ಪಾಡಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.