HEALTH TIPS

ಫೆ.4ರಂದು ಸಭೆ ಆರಾಧನಾಲಯಗಳ ಸಭೆ

   
               ಕಾಸರಗೋಡು: ಜಿಲ್ಲೆಯ ಆರಾಧನಾಲಯಗಳ ಪ್ರಸಾದ, ಅನ್ನದಾನ, ಹರಕೆ ಇತ್ಯಾದಿಗಳಿಗೆ ಆಹಾರ ಸುರಕ್ಷಾ ಪರವಾನಗಿ ಖಚಿತಪಡಿಸುವ ನಿಟ್ಟಿನಲ್ಲಿ ಫೆ.4ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲೆಯ ಆರಾಧನಾಲಯಗಳ ಪದಾಧಿಕಾರಿಗಳ ಸಭೆ ಜಿಲ್ಲಾಧಿಕಾರಿ
ಕಚೇರಿ ಸಭಾಂಗಣದಲ್ಲಿ ನಡೆಯಲಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸುವರು.
        ಜಿಲ್ಲೆಯ ಎಲ್ಲ ಆರಾಧನಾಲಯಗಳ ಪದಾಧಿಕಾರಿಗಳು ಹಾಜರಾಗುವಂತೆ ತಿಳಿಸಲಾಗಿದೆ. ಆಹಾರ ಸುರಕ್ಷಾ ಇಲಾಖೆಯೊಂದಿಗೆ ಸೇರಿ ಪರವಾನಗಿ/ನೋಂದಣಿ ಪಡೆದು ಆಹಾರ ಸುರಕ್ಷಾ ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಆಹಾರ ಸುರಕ್ಷಾ ಅಸಿಸ್ಟೆಂಟ್ ಕಮೀಷನರ್ ತಿಳಿಸಿದರು. ಆಹಾರ ಸುರಕ್ಷಾ ಪರವಾನಗಿ/ನೋಂದಣಿ ಪಡೆದುಕೊಳ್ಳಲು ಆಹಾರ ಸುರಕ್ಷಾ ಇಲಾಖೆಯ ವೆಬ್ ಸೈಟ್ ಮೂಲಕ ಆನ್ ಲೈನ್ ಆಗಿ ಅರ್ಜಿ ಸಲ್ಲಿಸಬಹುದು. ಸಂಸ್ಥೆಯ ಹೊಣೆಗಾರನ ಫೊಟೋ, ಗುರುತುಚೀಟಿ, ಅಧಿಕಾರ ಪತ್ರ ಅಪ್ ಲೋಡ್ ನಡೆಸಬೇಕು. ಮಾಹಿತಿಗೆ ದೂರವಾಣಿ ಸಂಖ್ಯೆ : 8943346194,04994256257,8943346610. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries