HEALTH TIPS

ಅರ್ಧದಲ್ಲೇ ಶಾಲೆ ಬಿಟ್ಟವರು 559 ಮಕ್ಕಳು ಡ್ರಾಪ್ ಔಟ್ ಫ್ರೀ ಕಾಸರಗೋಡು ಯೋಜನೆ : ಹೆಲ್ಪ್ ನಂಬ್ರ ಸಿದ್ಧ

   
           ಕಾಸರಗೋಡು: ಡ್ರಾಪ್ ಔಟ್ ಫ್ರೀ ಕಾಸರಗೋಡು ಯೋಜನೆಗೆ ಪೂರಕವಾಗಿ `ಹೆಲ್ಪ್ ಲೈನ್ ನಂಬ್ರ 6238479484' ಸಿದ್ಧವಾಗಿದೆ.
    ಬೇರೆ ಬೇರೆ ಕಾರಣಗಳಿಂದ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿ ತೆರಳುವ ಮಕ್ಕಳನ್ನು ಅವರ ಸಹಪಾಠಿಗಳ ಮೂಲಕ ಪತ್ತೆಮಾಡಿ ಶಾಲೆಗೆ ಮರಳಿ ಕರೆತರುವ, ಸಮಸ್ಯೆಗಳಿದ್ದರೆ ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತೆ ಮತ್ತು ಜಿಲ್ಲಾ ಮಕ್ಕಳ ಸಂರಕ್ಷಣೆ ಘಟಕ ವತಿಯಿಂದ ಈ ಹೆಲ್ಪ್ ಲೈನ್ ನಂಬ್ರ ಸಿದ್ಧಪಡಿಸಲಾಗಿದೆ.
         ಶಿಕ್ಷಣದ ದಿನಗಳಲ್ಲಿ ಜತೆಯಲ್ಲಿ ಕಲಿಕೆ ನಡೆಸುವ ವಿದ್ಯಾರ್ಥಿ ಶಾಲೆಗೆ ಸತತವಾಗಿ ಬಾರದೇ ಇದ್ದರೆ ಈ ದೂರವಾಣಿ ಸಂಖ್ಯೆ ಮೂಲಕ ಮಾಹಿತಿ ನೀಡಬೇಕು. ಎಲ್ಲ ಶಾಲೆಗಳಿಗೂ ಈ ನಂಬ್ರ ನೀಡಲಾಗಿದೆ.
                ತೆರಳಿದವರು 559 ಮಕ್ಕಳು :
     ಶಿಕ್ಷಣನಿರ್ದೇಶಕರ ಅಧಿಕೃತ ದಾಖಲೆ ಪ್ರಕಾರ ಜಿಲ್ಲೆಯಲ್ಲಿ 559 ಮಕ್ಕಳು ವಿವಿಧ ಕಾರಣಗಳಿಂದ 2018ಜೂನ್ ತಿಂಗಳಿಂದ ಅಕ್ಟೋಬರ್ 16 ವರೆಗೆ ಅರ್ಧದಲ್ಲೇ ಶಿಕ್ಷಣಮೊಟಕುಗೊಳಿಸಿ ಶಾಲೆಯಿಂದ ತೆರಳಿದ್ದಾರೆ.
               ಸಾರ್ವತ್ರಿಕ ಶಿಕ್ಷಣ ಕಡ್ಡಾಯ :
       14 ವರ್ಷ ಪ್ರಾಯದ ವರೆಗಿನ ಸಾರ್ವತ್ರಿಕ ಶಿಕ್ಷಣ ಒಂದು ಮಗುವಿಗೆ ಕಡ್ಡಾಯ ಎಂಬ ಘೋಷಣೆಯೊಂದಿಗೆ ಜಿಲ್ಲಾಡಳಿತದ ನೇತೃತ್ವದಲ್ಲಿ `ಡ್ರಾಪ್ ಔಟ್ ಫ್ರೀ ಕಾಸರಗೋಡು' ಯೋಜನೆ ಜಾರಿಗೊಳ್ಳುತ್ತಿದೆ. ಎಲ್ಲೆಡೆ ಮಕ್ಕಳ ಸಂರಕ್ಷಣೆ ಖಚಿತಗೊಳಿಸುವ ಮೂಲಕ ಜಿಲ್ಲೆಯನ್ನು ಶಿಶು ಸೌಹಾರ್ದ ಪ್ರದೇಶವನ್ನಾಗಿಸುವ ಗುರಿಯೊಂದಿಗೆ ಈ ಯೋಜನೆ ಅನುಷ್ಠಾನದಲ್ಲಿದೆ.
       ಈ ಯೋಜನೆ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಮುಖ್ಯಸ್ಥರ ಜಂಟಿ ಸಹಭಾಗಿತ್ವದಲ್ಲಿ ಜಿಲ್ಲಾ ಮಟ್ಟದ ಡ್ರಾಪ್ ಔಟ್ ಮೋನಿಟರಿಂಗ್ ಸಮಿತಿ ರಚಿಸಲಾಗಿದೆ. ಈ ಸಮಿತಿಯ ಆದೇಶ ಪ್ರಕಾರ ಜಿಲ್ಲೆಯ ವಿವಿಧ ಶಾಲೆಗಳಿಂದ ಶಿಕ್ಷಣಮೊಟಕುಗೊಳಿಸಿ ತೆರಳಿದ ಮಕ್ಕಳ ಗಣನೆ ನಡೆಸಲಾಗಿತ್ತು.
         ಏನಂತಾರೆ:
     * ಎಲ್ಲ ಶೈಕ್ಷಣಿಕ ದಿನಗಳಲ್ಲಿ ಎಲ್ಲ ವಿದ್ಯಾರ್ಥಿಗಳೂ ಹಾಜರಿರುವಂತೆ ಮಾಡುವಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು, ಶಿಕ್ಷಣ ಇಲಾಖೆ, ಜಿಲ್ಲಾಡಳಿತೆ ಸಹಕರಿಸಬೇಕು.
         - ಡಾ.ಡಿ.ಸಜಿತ್ ಬಾಬು 
      ಕಾಸರಗೋಡು ಜಿಲ್ಲಾಧಿಕಾರಿ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries