ನವದೆಹಲಿ: ಪ್ರಸಕ್ತ ಜಗತ್ತಿನ ಆರನೇ ಬಲಾಢ್ಯ ಆರ್ಥಿಕ ಶಕ್ತಿಯಾಗಿರುವ ಭಾರತ 2019ರಲ್ಲಿ ಬ್ರಿಟನ್ ದೇಶವನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೇರುವ ಸಾಧ್ಯತೆ ಇದೆ ಎಂದು ವರದಿಯೊಂದು ಹೇಳಿದೆ.
ಜಾಗತಿಕ ಆರ್ಥಿಕ ವಿಶ್ಲೆ?ಷಣಾ ಸಂಸ್ಥೆ ಪಿಡಬ್ಲ್ಯುಸಿ ತನ್ನ ವರದಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಜಗತ್ತಿನ ಆರನೇ ಬಲಾಢ್ಯ ಆರ್ಥಿಕ ಶಕ್ತಿಯಾಗಿರುವ ಭಾರತ 2019ರಲ್ಲಿ ಬ್ರಿಟನ್‍ನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೆ ಜಿಗಿಯಲಿದೆ ಎಂದು ಹೇಳಿದೆ. ಭಾರತ ಈ ವರ್ಷ ಶೇಕಡಾ 7.6 ಜಿಡಿಪಿ ದಾಖಲಿಸಿದರೆ ಇದು ನಿಸ್ಸಂಶಯವಾಗಿ ಸಾಧಿತವಾಗಲಿದೆ ಎಂದೂ ಪಿಡಬ್ಲ್ಯುಸಿ ಅಭಿಪ್ರಾಯ ಪಟ್ಟಿದೆ.
2017ರವರೆಗೆ ಬ್ರಿಟನ್ ಮತ್ತು ಫ್ರಾನ್ಸ್ ನಡುವೆ 5 ಮತ್ತು 6ನೇ ಸ್ಥಾನಕ್ಕೆ ಪೈಪೋಟಿ ಇತ್ತು. ಎರಡೂ ಸಮಾನ ಸಮಾನ ಅಭಿವೃದ್ಧಿ ಮತ್ತು ಜನಸಂಖ್ಯೆ ಇರುವ ರಾಷ್ಟ್ರಗಳಾಗಿದ್ದು, 2017ರಲ್ಲಿ ಭಾರತ 6ನೇ ಸ್ಥಾನಕ್ಕೆ?ರಿತ್ತು. ಮುಂದೆ 5ನೇ ಸ್ಥಾನಕ್ಕೆ?ರಿದರೆ ಅಲ್ಲೆ? ಖಾಯಂ ಆಗಿ ಉಳಿಯಲಿದೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.
ಬ್ರಿಟನ್ ಗೆ ಬ್ರೆಕ್ಸಿಟ್ ಹಿನ್ನಡೆ?
ಇನ್ನು ಬ್ರೆಕ್ಸಿಟ್ ನ ಗೊಂದಲ್ಲಿರುವ ಬ್ರಿಟನ್ ನ ಆರ್ಥಿಕತೆಗೆ ಇನ್ನಷ್ಟು ಹೊಡೆತ ಬೀಳುವ ನಿರೀಕ್ಷೆ ಇದ್ದು, ಫ್ರಾನ್ಸ್ ಕೂಡಾ ಅದನ್ನು ಹಿಂದಕ್ಕೆ ತಳ್ಳಿ ಆರನೇ ಸ್ಥಾನಕ್ಕೆ?ರಲಿದೆ ಪಿಡಬ್ಲ್ಯುಸಿ ತನ್ನ ವರದಿಯಲ್ಲಿ ಹೇಳಿದೆ.
ಪ್ರಸ್ತುತ 1131 ಲಕ್ಷ ಕೋಟಿಗಳ ಮೊತ್ತದ ಆರ್ಥಿಕತೆ ಹೊಂದಿರುವ ಅಮೆರಿಕ ವಿಶ್ವದ ಅತೀ ದೊಡ್ಡ ಆರ್ಥಿಕತೆ ದೇಶಗಳ ಪಟ್ಟಿಯಲ್ಲಿ ಅಗ್ರ ಸ್ಥಾನಿಯಾಗಿದ್ದು, 871 ಲಕ್ಷ ಕೋಟಿಗಳ ಗಾತ್ರ ಚೀನಾ 2ನೇ ಸ್ಥಾನದಲ್ಲಿದೆ. ಅಂತೆಯೇ 347 ಲಕ್ಷ ಕೋಟಿಯ ಜಪಾನ್ ಮತ್ತು 261 ಲಕ್ಷ ಕೋಟಿಯ ಜರ್ಮನಿ 3 ಮತ್ತು ನಾಲ್ಕನೇ ಸ್ಥಾನದಲ್ಲಿದ್ದು, 186 ಲಕ್ಷ ಕೋಟಿಯ ಬ್ರಿಟನ್ ಪ್ರಸ್ತುತ 5ನೇ ಸ್ಥಾನದಲ್ಲಿದೆ. 184 ಲಕ್ಷ ಕೋಟಿಯ ಭಾರತ 6ನೇ ಸ್ಛಾನದಲ್ಲಿದ್ದು, 183 ಲಕ್ಷ ಕೋಟಿಯ ಫ್ರಾನ್ಸ್ 7ನೇ ಸ್ಥಾನದಲ್ಲಿದೆ.