ಮಂಜೇಶ್ವರ: ಇತಿಹಾಸ ಪ್ರಸಿದ್ದ ಮಂಗಲ್ಪಾಡಿ ಖಾಝಿ ಕುಂಞÂಆಹ್ಮದ್ ಮುಸ್ಲಿಯಾರ್ ಉಪ್ಪಾಪ ಮಖಾಂ ಉರೂಸ್ ಹಾಗೂ ಧಾರ್ಮಿಕ ಪ್ರಭಾಷಣ ಜ. 6 ರಿಂದ 13 ರ ವರೆಗೆ ನಡೆಯಲಿರುವುದು ಎಂದು ಅಯ್ಯೂಬ್ ಹಿಂದಾದಿ ಮಂಜೇಶ್ವರ ಪ್ರೆಸ್ ಕ್ಲಬ್ಬಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜ. 6 ರಂದು ಭಾನುವಾರ ಸಂಜೆ 6 ಕ್ಕೆ ಮಖಾಂ ಝಿಯಾರತಿನೊಂದಿಗೆ ಧಾರ್ಮಿಕ ಪ್ರವಚನಕ್ಕೆ ಚಾಲನೆ ದೊರಕಲಿದೆ. ಮುಟ್ಟಮ್ ಕುಂಞÂಕೋಯ ತಂಙಳ್ ಝಿಯಾರತಿಗೆ ನೇತೃತ್ವ ನೀಡಲಿದ್ದಾರೆ. ಲಂಡನ್ ಮೊಹಮ್ಮದ್ ಹಾಜಿ ಧ್ವಜಾರೋಹಣ ಗೈಯ್ಯುವರು.
ಕುಂಬೋಲ್ ಆಟಕೋಯ ತಂಙಳ್ ಅಧ್ಯಕ್ಷತೆ ವಹಿಸುವರು. ಮತ ಸೌಹಾರ್ಧ ವೇದಿಕೆಯನ್ನು ಶಾಸಕ ಎನ್ ಎ ನೆಲ್ಲಿಕುನ್ನು ಉದ್ಘಾಟಿಸುವರು. ಕರ್ನಾಟಕ ಸಚಿವ ಯು ಟಿ ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ರಾತ್ರಿ 8 ಕ್ಕೆ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಶಮೀರ್ ಮನ್ನಾನಿ ಮುಖ್ಯ ಭಾಷಣ ಮಾಡುವರು. ಮುಂದಿನ ದಿನಗಳಲ್ಲಿ ನಡೆಯಲಿರುವ ಧಾರ್ಮಿಕ ಪ್ರವಚನದಲ್ಲಿ ಪಂಡಿತ ಶಿರೋಮಣಿಗಳು ಭಾಗವಹಿಸುವರು ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅಬ್ದುಲ್ ಖಾದರ್ ಹಾಜಿ, ಅಬ್ದುಲ್ಲ ಕುಂಞÂ ಫೈಝಿ, ಅಬ್ದುಲ್ ಹಮೀದ್ ತೋಟ, ಮೊಹಮ್ಮದ್ ಅನ್ಸಾರಿ ಮೊದಲಾದವರು ಉಪಸ್ಥಿತರಿದ್ದರು.