ನವದೆಹಲಿ: ನೆಸ್ಲೆ ಇಂಡಿಯಾ ಕಂಪೆನಿಯ ತಪ್ಪು ಜಾಹೀರಾತು, ತಪ್ಪು ವ್ಯಾಪಾರ ಕ್ರಮ ಮತ್ತು ಮಾಹಿತಿಯಿಂದಾಗಿ ಸುಮಾರು 640 ಕೋಟಿ ರೂ. ಹಾನಿಯಾಗಿದೆ ಎಂದು ಆರೋಪಿಸಿ ರಾಷ್ಟ್ರೀಯ ಗ್ರಾಹಕ ವಿವಾದ ನಿವಾರಣಾ ಆಯೋಗದ ಮುಂದೆ ಕೇಂದ್ರ ಸರ್ಕಾರ ಹೂಡಿರುವ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ನಿನ್ನೆ ಪರಾಮರ್ಶೆ ನಡೆಸಿದೆ.
ಮ್ಯಾಗಿ ಸ್ಯಾಂಪಲ್ ಗಳ ಮೇಲೆ ಮೈಸೂರಿನ ಕೇಂದ್ರಿಯ ಆಹಾರ ಸಂಶೋಧನಾ ಮತ್ತು ತಂತ್ರಜ್ಞಾನ ಸಂಸ್ಥೆ ನೀಡಿರುವ ವರದಿ ಆಧಾರದ ಮೇಲೆ ಪ್ರೊಸೀಡಿಂಗ್ಸ್ ಆಧಾರವನ್ನು ರೂಪಿಸುತ್ತೇವೆ ಎಂದು ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಅವರ ನೇತೃತ್ವದಲ್ಲಿನ ನ್ಯಾಯಪೀಠ ಹೇಳಿಕೆ ನೀಡಿದೆ.
ನೆಸ್ಲೆ ಮೇಲ್ಮನವಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಗ್ರಾಹಕ ವಿವಾದ ನಿವಾರಣಾ ಆಯೋಗದ ಮುಂದೆ ವಿಚಾರಣೆಗೆ ಸುಪ್ರೀಂಕೋರ್ಟ್ ಈ ಹಿಂದೆ ತಡೆ ನೀಡಿತ್ತು.
ಸುಮಾರು ಮೂರು ದಶಕಗಳಷ್ಟು ಹಳೆಯದಾದ ಗ್ರಾಹಕ ರಕ್ಷಣೆ ಕಾಯ್ದೆ ಬಳಕೆ ವಿನಾಯತಿಯಲ್ಲಿ ನೆಸ್ಲೆ ಇಂಡಿಯಾ ಕಂಪನಿ ವಿರುದ್ಧ ರಾಷ್ಟ್ರೀಯ ಗ್ರಾಹಕ ವಿವಾದ ನಿವಾರಣಾ ಆಯೋಗದ ಮುಂದೆ ಗ್ರಾಹಕ ವ್ಯವಹಾರಗಳ ಸಚಿವಾಲಯ 2015ರಲ್ಲಿ ದೂರು ದಾಖಲಿಸಿತ್ತು. ಅದೇ ವರ್ಷ ಮ್ಯಾಗಿ ಸೇವನೆ ಸುರಕ್ಷಿತವಿಲ್ಲ ಎಂದು ಹೇಳಿ ನಿರ್ಬಂಧಿಸಲಾಗಿತ್ತು.