ನವದೆಹಲಿ: ದೇಶಾದ್ಯಂತ ಕಂಪ್ಯೂಟರ್ ಸಿಸ್ಟಮ್ ಗಳ ಮೇಲೆ ಕಣ್ಗಾವಲು ಇರಿಸಲು ಕೇಂದ್ರ ಸರ್ಕಾರ 10 ತನಿಖಾ ಸಂಸ್ಥೆಗಳಿಗೆ ಆದೇಶ ನೀಡಿದ್ದ ಪ್ರಕರಣದ್ಲಲಿ ಸುಪ್ರೀಂ ಕೋರ್ಟ್ ನೊಟೀಸ್ ಜಾರಿ ಮಾಡಿದ್ದು, 6 ವಾರಗಳ ಕಾಲಾವಕಾಶ ನೀಡಿದೆ.
ಕಂಪ್ಯೂಟರ್ ಮೇಲಿನ ಕಣ್ಗಾವಲನ್ನು ಪ್ರಶ್ನಿಸಿ ಪಿಐಎಲ್ ಸಲ್ಲಿಸಲಾಗಿತ್ತು. ಈ ಪಿಐಎಲ್ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೋಯ್, ಎಸ್ ಕೆ ಕೌಲ್ ಅವರಿದ್ದ ಪೀಠ ಕೇಂದ್ರಕ್ಕೆ ನೊಟೀಸ್ ಜಾರಿ ಮಾಡಿ 6 ವಾರಗಳ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.
ಯಾವುದೇ ಕಂಪ್ಯೂಟರಿನಿಂದ ಹೊರ ಹೋಗುವ ಸಂದೇಶಗಳನ್ನು ತಡೆಯುವ ನಿಯಂತ್ರಿಸುವ ಅಥವಾ ರಹಸ್ಯ ಸಂದೇಶಗಳನ್ನು ಭೇದಿಸಿ ಓಡುವ (ಡಿಕ್ರಿಫ್ಟಿಂಗ್) ಅಧಿಕಾರವನ್ನು ಕೇಂದ್ರದ 10 ಸಂಸ್ಥೆಗಳಿಗೆ ನೀಡಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಅಡ್ವೊಕೇಟ್ ಮನೋಹರ್ ಲಾಲ್ ಶರ್ಮಾ ಎಂಬುವವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.