ಹೊಸದಿಲ್ಲಿ : ರಾಷ್ಟ್ರ ಪಿತ ಮಹಾತ್ಮಾ ಗಾಂಧೀಜಿಯವರ 71ನೇ ಪುಣ್ಯ ತಿಥಿಯಾದ ನಿನ್ನೆ (ಬುಧವಾರ) ದೇಶ ಅವರನ್ನು ಶ್ರದ್ಧೆ ಮತ್ತು ಗೌರವದಿಂದ ಗುಣಗಾನ ಮಾಡಿ ನೆನೆಸಿಕೊಂಡಿತು.
ರಾಷ್ಟ್ರಪತಿ ರಾಮ ನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪಿತನಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಕೋವಿಂದ್, ಮೋದಿ ಮತ್ತು ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರು ರಾಜಘಾಟ್ ನಲ್ಲಿನ ಗಾಂಧಿ ಸ್ಮಾರಕದಲ್ಲಿ ಪುಷ್ಪಾಂಜಲಿ ಅರ್ಪಿಸಿದರು.
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್‍ದೀಪ್ ಸಿಂಗ್ ಪುರಿ ಅವರು ಕೂಡ ರಾಜಘಾಟ್‍ನಲ್ಲಿ ರಾಷ್ಟ್ರಪಿತನಿಗೆ ಪುಷ್ಟಾಂಜಲಿ ಅರ್ಪಿಸಿದರು.
ಮಹಾತ್ಮಾ ಗಾಂಧೀಜಿಯವರಿಗೆ ಅತ್ಯಂತ ಪ್ರಿಯತವಾಗಿದ್ದ ರಘುಪತಿ ರಾಘವ ರಾಜಾರಾಂ ಭಜನೆಯನ್ನು ರಾಜಘಾಟ್ ನಲ್ಲಿ ನುಡಿಸಲಾಯಿತು.
ಗಾಂಧೀಜಿಯವರನ್ನು 1948ರ ಜನವರಿ 30ರಂದು ಗುಂಡೆಸೆದು ಹತ್ಯೆ ಮಾಡಲಾಗಿತ್ತು.