ಮಂಗಳೂರು: ಗಾನ ಗಂಧರ್ವ ಯೇಸುದಾಸ್ ಗೆ ನಿನ್ನೆ 79ನೇ ಜನ್ಮದಿನದ ಸಂಭ್ರಮ. ಪ್ರತಿ ಬಾರಿಯಂತೆ ಈ ಬಾರಿ ಸಹ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿದ ಯೇಸುದಾಸ್ ಅಲ್ಲಿಯೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಗುರುವಾರ ಬೆಳಿಗ್ಗೆ ಪತ್ನಿ ಪ್ರಭಾ ಜೇಸುದಾಸ್ ಜತೆ ಕೊಲ್ಲೂರಿಗೆ ಆಗಮಿಸಿದ ಗಾಯಕ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ.
ಕೊಲ್ಲೂರಿನಲ್ಲಿ ಸಂಕಲ್ಪದಂತೆ ಚಂಡಿಕಾ ಹೋಮ ನಡೆಸಿದ್ದು ಪೂರ್ಣಾಹುತಿ ನೆರವೇರಿಸಿದರು. ಅಲ್ಲದೆ ಕ್ಷೇತ್ರದಲ್ಲಿ ಅಕ್ಷರಾಭ್ಯಾಸ ಸೇವೆ ಸಲ್ಲಿಸಿದ್ದಾರೆ.
ಭಕ್ತರು, ಅಭಿಮಾನಿಗಳ ಸಮ್ಮುಖದಲ್ಲಿ ಕ್ಷೇತ್ರದ ರ್ಭ ಸ್ವರ್ಣಮುಖಿ ಸಭಾಭವನದಲ್ಲಿ ಭಕ್ತಿಗೀತೆಯನ್ನು ಹಾಡಿದರು.ತಮ್ಮೆಲ್ಲಾ ಧಾರ್ಮಿಕ ವಿಧಿ ವಿಧಾನ, ಕಾರ್ಯಕ್ರಮ ಪೂರೈಸಿದ ಗಾಯಕ ಮದ್ಯಾಹ್ನ ಅನ್ನಪ್ರಸಾದ ಸ್ವೀಕರಿಸಿ ಕೇರಳಕ್ಕೆ ಹಿಂತಿರುಗಿದ್ದಾರೆ.