ಕಾಸರಗೋಡು: ಹಿರಿಯ ಕ್ರಾಂತಿಕಾರಿ ಸ್ವಾಮಿ ಆನಂದ ತೀರ್ಥರ ಸಂಸ್ಮರಣೆ ಮತ್ತು ರಾಜ್ಯದ ಬಲುದೊಡ್ಡ ಆಂದೋಲನಗಳಲ್ಲಿ ಒಂದಾದ ಕೊಡಕ್ಕಾಡ್ ಸಹಪಂಕ್ತಿ ಭೋಜನದ 80ನೇ ವಾರ್ಷಿಕೋತ್ಸವ ಆಚರಣೆ ಜ.19 ಮತ್ತು 20ರಂದು ಕೊಡಕ್ಕಾಡ್ ವೆಳ್ಳಚ್ಚಾಲ್‍ನಲ್ಲಿ ನಡೆಯಲಿದೆ.
ಕೇರಳ ಜಾನಪದ ಅಕಾಡೆಮಿ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪ್ರಗತಿಪರ ಕಲಾಸಾಹಿತ್ಯ ಸಂಘ ಜಂಟಿ ವತಿಯಿಂದ ಕಾರ್ಯಕ್ರಮ ಜರಗಲಿದೆ.
ಜ.19ರಂದು ಸಂಜೆ 5 ಗಂಟೆಗೆ ಸ್ವಾಮಿ ಆನಂದ ತೀರ್ಥ, ಟಿ.ಎಸ್.ತಿರುಮುಂಬ್, ಪಿ.ಸಿ.ಕಾತ್ರ್ಯಾಯಿನಿ ಕುಟ್ಟಿ, ಪರಮೇಶ್ವರಿ ಅಂತರ್ಜನಂ ಅವರ ಭಾವಚಿತ್ರಗಳಿಗೆ ಸ್ವಾಗತ ಮತ್ತು ವರ್ಣರಂಜಿತ ಮೆರವಣಿಗೆ ನಡೆಯಲಿದೆ.
ಚಿತ್ರ ಪ್ರದರ್ಶನ : ತದನಂತರ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಖೆಯ ಸಹಭಾಗಿತ್ವದೊಂದಿಗೆ `ಪ್ರಗತಿ ಪಥದ ಹೆಜ್ಜೆಗಾರಿಕೆ' ಎಂಬ ವಿಷಯದಲ್ಲಿ ಚಿತ್ರ ಪ್ರದರ್ಶನ ನಡೆಯಲಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್‍ಬಾಬು ಸಮಾರಂಭ ಉದ್ಘಾಟಿಸುವರು. ಕೇರಳ ಸಾಹಿತ್ಯ ಅಕಾಡೆಮಿ ಸದಸ್ಯ ಪಿ.ವಿ.ಕೆ.ಪನೆಯಾಲ್ ಅಧ್ಯಕ್ಷತೆ ವಹಿಸುವರು. ಕೇರಳ ಜಾನಪದ ಅಕಾಡೆಮಿ ಕಾರ್ಯದರ್ಶಿ ಕೀಚೇರಿ ರಾಘವನ್ ಪ್ರಧಾನ ಭಾಷಣ ಮಾಡುವರು. ಜಿಲ್ಲಾ ಮಾಹಿತಿ ಕೇಂದ್ರ ಅ„ಕಾರಿ ಎಂ.ಮಧುಸೂದನನ್, ನಾರಾಯಣನ್ ಕಾವುಂಬಾಯಿ ಮೊದಲಾದವರು ಭಾಗವಹಿಸುವರು. ಕಾರ್ಯಕಾರಿ ಅಧ್ಯಕ್ಷ ಪಿ.ಪಿ.ಸುಕುಮಾರನ್ ಮತ್ತು ವಿ.ವಿ.ಕೃಷ್ಣನ್ ಉಪಸ್ಥಿತರಿರುವರು. ಸಾಂಸ್ಕøತಿಕ ಕಾರ್ಯಕ್ರಮ ಅಂಗವಾಗಿ ಏಳುಮಂಜೂರು ಕೋಡಿಯ ಪಡಯಣಿ ಕಲಾಸಂಘ ಪ್ರಸ್ತುತಪಡಿಸುವ ಪಡಯಣಿ ನಡೆಯಲಿದೆ.
ನಾಳೆ ಬೆಳಿಗ್ಗೆ 10 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮವನ್ನು ಸಂಸದ ಪಿ.ಕರುಣಾಕರನ್ ಮತ್ತು ನ್ಯಾಯಮೂರ್ತಿ ನಾಗಮೋಹನ್ ದಾಸ್ ಉದ್ಘಾಟಿಸುವರು. ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸುವರು. ಕೇರಳ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ನಿರ್ವಾಹಕ ಸಮಿತಿ ಸದಸ್ಯ ಇ.ಪಿ.ರಾಜಗೋಪಾಲ್ ಮೊದಲಾದವರು ಪ್ರಧಾನ ಭಾಷಣಮಾಡುವರು.
ಸಂಸ್ಮರಣೆ ಉಪನ್ಯಾಸ : `ಸ್ವಾಮಿ ಆನಂದ ತೀರ್ಥರು ಮತ್ತು ಕೇರಳೀಯ ಪ್ರಗತಿಪರತೆ' ಎಂಬ ವಿಷಯದಲ್ಲಿ ಸಿ.ವಿ.ಬಾಲಕೃಷ್ಣನ್ ಸಂಸ್ಮರಣೆ ಉಪನ್ಯಾಸ ಮಾಡುವರು. ನೀಲೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಪಿ.ವಿ.ಜಾನಕಿ, ಪಿಲಿಕೋಡ್ ಗ್ರಾಮ ಪಂಚಾಯತ್ ಅಧ್ಯಕ್ಷ ಟಿ.ವಿ.ಶ್ರೀಧರನ್ ಮಾಸ್ಟರ್ ಭಾಗವಹಿಸುವರು. ರವೀಂದ್ರನ್ ಕೊಡಕ್ಕಾಡ್ ಮತ್ತು ಎನ್.ರವೀಂದ್ರನ್ ಉಪಸ್ಥಿತರಿರುವರು.
ಮಧ್ಯಾಹ್ನ ಸಹಪಂಕ್ತಿ ಭೋಜನ ನಡೆಯಲಿದೆ. 2 ಗಂಟೆಗೆ `ಸಹಪಂಕ್ತಿ ಭೋಜನ ಮತ್ತು ಕೊಡಕ್ಕಾಡ್ ಸಮ್ಮೇಳನ' ಎಂಬ ವಿಷಯದಲ್ಲಿ ಮಾಜಿ ಶಾಸಕ ಕೆ.ಪಿ.ಸತೀಶ್ಚಂದ್ರನ್, `ಮಹಿಳೆಯರ ಪ್ರಗತಿ ಮತ್ತುಕೊಡಕ್ಕಾಡ್ ಗ್ರಾಮ' ಎಂಬ ವಿಷಯದಲ್ಲಿ ಡಾ.ಟಿ.ಕೆ.ಆನಂದಿ, `ಸಾಹಿತ್ಯ ಪ್ರಕಾರಗಳಲ್ಲಿ ಸ್ಥಾನ ಪಡೆದ ಪಂಕ್ತಿಭೋಜನ ಆಂದೋಲನ' ಎಂಬ ವಿಷಯದಲ್ಲಿ ಅಶೋಕನ್ ಚರುವಿಲ್, `ಮಹಿಳಾ ಪ್ರಗತಿ ಪ್ರಕ್ರಿಯೆ" ಎಂಬ ವಿಷಯದಲ್ಲಿ ಡಾ.ಆರ್.ರಾಜಶ್ರೀ ಉಪನ್ಯಾಸ ನಡೆಸುವರು.
ಜಿಲ್ಲಾ ಪಂಚಾಯತ್ ಸದಸ್ಯ ಡಾ.ವಿ.ಪಿ.ಪಿ.ಮುಸ್ತಫ ಅಧ್ಯಕ್ಷತೆ ವಹಿಸುವರು. ಸಿ.ಎಂ.ವಿನಯಚಂದ್ರನ್ ಸ್ವಾಗತಿಸುವರು. ಇ.ಕುಂಞÂಕೃಷ್ಣನ್ ಉಪಸ್ಥಿತರಿರುವರು.