ಕುಂಬಳೆ: ಶಬರಿಮಲೆಯ ಆಚಾರ ಅನುಷ್ಠಾನಗಳನ್ನು ಬುಡಮೇಲುಗೊಳಿಸಲು ವಾಮಮಾರ್ಗ ಹಿಡಿದ ಸಿಪಿಎಂ ಸರಕಾರದ ಕ್ರಮವನ್ನು ಖಂಡಿಸಿ ಶಬರಿಮಲೆ ಕ್ರಿಯಾಸಮಿತಿಯ ನೇತೃತ್ವದಲ್ಲಿ ಹರತಾಳದ ಹಿನ್ನಲೆಯಲ್ಲಿ ಬಂದ್ಯೋಡಿನಲ್ಲಿ ಗುರುವಾರ ಬಿಜೆಪಿ, ಶಬರಿಮಲೆ ಅಯ್ಯಪ್ಪ ಭಕ್ತ ಸಮಿತಿಗಳು ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಕೋಮು ಸಂಘರ್ಷಕ್ಕೆ ತಿರುಗಿ ವ್ಯಾಪಕ ಹಿಂಸಾಚಾರಕ್ಕೆ ತಿರುಗಿದ ಘಟನೆ ಭಾರೀ ಆತಂಕಕ್ಕೆ ಕಾರಣವಾಯಿತು.
ಕ್ರಿಯಾಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಿಗ್ಗೆ ಬಂದ್ಯೋಡಿನಲ್ಲಿ ಅಯ್ಯಪ್ಪ ನಾಮಜಪ ಪ್ರತಿಭಟನೆ ನಡೆಸುತ್ತಿರುವಂತೆ ಕೆಲವು ಬೈಕ್ ಹಾಗೂ ಅಟೋಗಳ ಮೂಲಕ ಆಗಮಿಸಿದ ಕಿಡಿಗೇಡಿಗಳು ನಾಮಜಪ ನಡೆಸುತ್ತಿದ್ದ ಪರಿಸರದಲ್ಲಿ ಅತ್ತಿಂದ್ದಿತ್ತ ಹಲವು ಬಾರಿ ಠಳಾಯಿಸಿದರು. ಬಳಿಕ ನಾಮಜಪ ನಡೆಸುತ್ತಿರುವವರ ಮೇಲೆಯೇ ವಾಹನ ಚಲಾಯಿಸಲೆತ್ನಿಸಿದಾಗ ಈ ಬಗ್ಗೆ ವಿಚಾರಿಸುತ್ತಿರುವಂತೆ ಮಾತಿನ ಚಕಮಕಿ ನಡೆದು ಅದು ಪರಸ್ಪರ ಕಾದಾಟಕ್ಕೆ ತಿರುಗಿತು. 50ಕ್ಕಿಂತಲೂ ಮಿಕ್ಕಿದಸಂರ್ಖಯೆಯಲ್ಲಿದ್ದ ಕಿಡಿಗೇಡಿಗಳ ತಂಡ ಸಿಕ್ಕಸಿಕ್ಕವರ ಮೇಲೆ ಆಕ್ರಮಣ ನಡೆಸಿದ್ದು, ಹಲವು ಅಂಗಡಿ-ಮುಗ್ಗಟ್ಟುಗಳನ್ನು ಪುಡಿಉಗಟ್ಟಿದರು. ಎರಡು ಅಟೋ, ಬೈಕ್‍ಗಳಿಗೆ ಬೆಂಕಿಹಚ್ಚಿದರು. ಘಟನೆಯನ್ನು ತಿಳಿದು ಆಗಮಿಸಿದ ಕುಂಬಳೆ ಹಾಗೂ ಮಂಜೇಶ್ವರ ಪೋಲೀಸರು ಲಾಠ ಚಾರ್ಜ್ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು. ಆದರೆ ಯಾರ ಮೇಲೂ ದೂರು ದಾಖಲಿಸದಿರುವುದು ಅಯ್ಯಪ್ಪ ಭಕ್ತ ಸಮಿತಿಯನ್ನು ರೊಚ್ಚಿಗೆಬ್ಬಿಸಿದೆ.
ರಾಜ್ಯಾದ್ಯಂತ ಆಡಳಿತ ರೂಢ ಸಿಪಿಎಂ ಹಾಗೂ ಬಿಜೆಪಿ-ಸಂಘಪರಿವಾರ ಗಳ ಮಧ್ಯೆ ಗಲಭೆ ನಡೆದಿದ್ದರೆ ಬಂದ್ಯೋಡು ಸಹಿತ ಮಂಜೇಶ್ವರ ತಾಲೂಕಿನ ಪ್ರಮುಖ ಪ್ರದೇಶಗಳಲ್ಲಿ ಈ ಪ್ರತಿಭಟನೆ-ಗಲಭೆ ಕೋಮು ಸಂಘರ್ಷವಾಗಿ ಬದಲಾಗಿದ್ದು, ಎನ್‍ಡಿಎಫ್(ಎಸ್‍ಡಿಪಿಐ) ಇದರ ಹಿಂದಿದೆಯೆಂದು ಸೂಚನೆ ಲಭ್ಯವಾಗಿದೆ.