ಪತ್ತನಂತಿಟ್ಟು: ಪ್ರಸಿದ್ದ ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ ನಿನ್ನೆ (ಜನವರಿ 14) ಸಾಂಪ್ರದಾಯಿಕ ಮಕರಜ್ಯೋತಿ ದರ್ಶನ ನೆರವೇರಿತು. ಅಯ್ಯಪ್ಪನ ಸನ್ನಿಧಾನ ಪೊನ್ನಂಬಲಮೇಡು ಬೆಟ್ಟದಲ್ಲಿ ಜ್ಯೋತಿ ದರ್ಶನವಾಗಿದ್ದು ಸಾವಿರಾರು ಭಕ್ತರು ಜ್ಯೋತಿ ದರ್ಶನ ಪಡೆದು ಪುಳಕಿತರಾದರು.
ಅಯ್ಯಪ್ಪ ಸನ್ನಿಧಾನಕ್ಕೆ ಮಹಿಳೆಯರ ಪ್ರವೇಶದಿಂದ ವಿವಾದ ಹಾಗೂ ಸಂಘರ್ಷಗಳಿಗೆ ಸಾಕ್ಷಿಯಾಗಿದ್ದ ಶಬರಿಮಲೆಯಲ್ಲಿ ಮಕರ ಸಂಕ್ರಾಂತಿಯ ಶುಭ ವೇಳೆ ನಿನೆ ಸಂಜೆಸೂರ್ಯಾಸ್ತಮಾನಕ್ಕೆಅಲ್ಪ ಮೊದಲು ಮಕರ ಜ್ಯೋತಿ ದರ್ಶನವಾಗಿದೆ.
ಜ್ಯೋತಿಯ ದರ್ಶನ ಆಗುತ್ತಿದ್ದಂತೆಯೇ ಭಕ್ತರು ಗಟ್ಟಿ ದನಿಯಲ್ಲಿ ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಜಯಘೋಷಗಳನ್ನು ಮಾಡಿದರು.
ದೇಶದ ನಾನಾ ಕಡೆಗಳಿಂದ ಶಬರಿಮಲೆ ಸನ್ನಿಧಾನಕ್ಕೆ ಭಕ್ತರು ಆಗಮಿಸಿದ್ದು ಜ್ಯೋತಿ ದರ್ಶನಕ್ಕೆ ಸಾಕ್ಷಿಯಾಗಿದ್ದರು. ಆದರೆ ವಿವಾದ, ಕ್ಷೋಭೆಗಳ ಕಾರಣದಿಂದ ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ಇಳಿಮುಖವಾಗಿದ್ದದ್ದು ಕಂಡು ಬಂದಿದೆ.