ಬದಿಯಡ್ಕ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಐತಿಹಾಸಿಕ ಕ್ರಮವಾಗಿ ಕೈಗೊಂಡ ಮೇಲ್ವರ್ಗದ ಬಡ ಜನಸಾಮಾನ್ಯರಿಗೆ ನೀಡಲಾದ ಮೀಸಲಾತಿ ಕ್ರಮವು ಸ್ತುತ್ಯರ್ಹ ಕಾನೂನುಗಳಲ್ಲಿ ಒಂದಾಗಿದೆ ಎಂದು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಪ್ರಧಾನ ಕಾರ್ಯದರ್ಶಿ ಅರವಿಂದ ಅಲೆವೂರಾಯ ಅಭಿನಂದನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅರ್ಹತೆಗಳಿದ್ದೂ, ಮೇಲ್ವರ್ಗದ ಹಣೆಪಟ್ಟಿಯಿರುವುದರಿಂದ ಬಡ=ಮಧ್ಯಮ ವರ್ಗದ ಸಾಮಾನ್ಯನು ಈವರೆಗೆ ತೀವ್ರ ಸಂಕಷ್ಟ ಮತ್ತು ಅನ್ಯಾಯಗಳನ್ನು ಎದುರಿಸಿದೆ. ಈ ಹಿಂದಿನ ಎಲ್ಲಾ ಸರಕಾರಗಳಿಗೂ ಈ ಬಗ್ಗೆ ಸ್ಪಷ್ಟ ಅರಿವಿದ್ದರೂ ಸೂಕ್ತ ಕಾನೂನು ಕೈಗೊಳ್ಳದಿರುವುದರಿಂದ ಅನೇಕ ಮಂದಿ ಅನ್ಯಾಯಕ್ಕೊಳಗಾಗಿದ್ದರು. ಆದರೆ ಇದೀಗ ಜ್ಯಾರಿಗೊಳಿಸಲಿರುವ ನೂತನ ಮೀಸಲಾತಿ ಕಾನೂನು ಸಮರ್ಪಕ ನಿಲುವಾಗಿದ್ದು, ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಶಿವಳ್ಳಿ ಬ್ರಾಹ್ಮಣ ಸಭಾ ಜಿಲ್ಲಾ ಘಟಕ ಅಭಾರಿಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೇಲ್ವರ್ಗ ಬಡವರಿಗೆ ಮೀಸಲಾತಿ-ಕೇಂದ್ರಕ್ಕೆ ಶಿವಳ್ಳಿ ಬ್ರಾಹ್ಮಣ ಸಭೆಯ ಅಭಿನಂದನೆ
0
ಜನವರಿ 11, 2019