ಕಾಸರಗೋಡು: ಮನುಷ್ಯನ ಮನಸ್ಸು ಬಯಸಿದ್ದೆಲ್ಲಾ ಸಂಪಾದಿಸಲು ಸಾಧ್ಯವಿಲ್ಲ. ಸುಖ ಮತ್ತು ದು:ಖಗಳೆಲ್ಲವೂ ದೈವದತ್ತವಾದುದು. ಸತತವಾದ ಸಾಂಸ್ಕøತಿಕ-ಸಾಹಿತ್ಯದ ಕಾರ್ಯಕ್ರಮಗಳನ್ನು ನಡೆಸುತ್ತಾ ಮಾನಸಿಕ ನೆಮ್ಮದಿಗಳಿಸಲು ಸಾಧ್ಯವೆಂದು ಚಲನಚಿತ್ರ ನಟ, ರಂಗ ನಿರ್ದೇಶಕ ಕಾಸರಗೋಡು ಚಿನ್ನಾ ಹೇಳಿದರು.
ಅವರು ಪಿಲಿಕುಂಜೆ ಸ್ಪೋಟ್ರ್ಸ್ ಆ್ಯಂಡ್ ಆಟ್ರ್ಸ್ ಕ್ಲಬ್‍ನ 30 ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾಸರಗೋಡಿನಲ್ಲಿರುವುದು ಕನ್ನಡದ ಮಣ್ಣು. ಅದನ್ನು ಇಲ್ಲಿಂದ ಕಿತ್ತೊಗೆಯಲು ನಡೆಯುವ ಪ್ರಯತ್ನವು ಎಂದಿಗೂ ಸಾಧ್ಯವಾಗದು. ಹಿಂದಿನ ಬಾಗಿಲಿನಿಂದ ಬರುವ ದೈತ್ಯಶಕ್ತಿಗಳನ್ನು ಎದುರಿಸುವ ತಾಕತ್ತು ಕನ್ನಡಿಗರಿಗಿದೆ ಎಂದರು.
ಶ್ರೀ ಹೇಮಾಂಬಿಕ ಪ್ರಾಂಗಣದಲ್ಲಿ ಜರಗಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯತೀಂದ್ರ ಬಹುಮಾನ್ ಮೂಡಬಿದ್ರೆ ವಹಿಸಿದರು. ಕಾರ್ಯಕ್ರಮವನ್ನು ಮಂಗಳೂರಿನ ಮಹೀಂದ್ರಜೀ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಸ್ಥೆಯ ಗೌರವಾಧ್ಯಕ್ಷ ವಾಮನ ಮುಳ್ಳಂಗೋಡು ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಪ್ರಮೋದ್ ಕುಮಾರ್ ಪಿಲಿಕುಂಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾಸರಗೋಡಿನ ಸಾಂಸ್ಕøತಿಕ ರಂಗಕ್ಕೆ ಕೊಡುಗೆ ನೀಡಿದ ಕಾಸರಗೋಡು ಚಿನ್ನಾ ಹಾಗು ರಂಗನಟ ಬಬ್ಬಿ ಪಿಲಿಕುಂಜೆ ಅವರಿಗೆ ಹುಟ್ಟೂರ ಗೌರವ ನೀಡಿ ಸಮ್ಮಾನಿಸಲಾಯಿತು.
ಸಂಸ್ಥೆಯು ಏರ್ಪಡಿಸಿದ ಆಟೋಟ ಸ್ಪರ್ಧೆಗಳ ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು. ರಂಗಚಿನ್ನಾರಿ ವತಿಯಿಂದ ಖ್ಯಾತ ಸುಗುಮ ಸಂಗೀತ ಗಾಯಕರಾದ ರವೀಂದ್ರ ಪ್ರಭು ಹಾಗು ಕಿಶೋರ್ ಪೆರ್ಲ ಅವರಿಂದ `ಹರಸು ತಾಯೆ' ಭಕ್ತಿ, ಭಾವ, ಜನಪದ ಗೀತೆಗಳ ಕಾರ್ಯಕ್ರಮ ಹಾಗು ಸ್ಥಳೀಯ ಮಕ್ಕಳಿಂದ ನೃತ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ನರೇಂದ್ರ ಪಿಲಿಕುಂಜೆ ಸ್ವಾಗತಿಸಿದರು. ಶೃತಿ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಕೃಪಾಶಂಕರ ಪಿಲಿಕುಂಜೆ ವಂದಿಸಿದರು.