HEALTH TIPS

ಪರಿಸರ ಕಲುಷಿತ ಗೊಳಿಸುವವರ ವಿರುದ್ಧ ಕ್ರಮ ಬಂತು ಜಾಗೃತಿ ಮೂಡಿಸುವ ಹೊತ್ತಗೆ

         
         ಕಾಸರಗೋಡು: ತ್ಯಾಜ್ಯ ಮುಕ್ತ ಪರಿಸರ ನಿರ್ಮಾಣ ನಿಟ್ಟಿನಲ್ಲಿ ಪರಿಸರ ಕಲುಷಿತಗೊಳಿಸುವವರ ವಿರುದ್ಧ  ಕ್ರಮಕೈಗೊಳ್ಳುವ ಕಾನೂನು ಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸುವ, ಹಸುರು ಕಾಯಿದೆ ಬಗ್ಗೆ ಮಾಹಿತಿ ನೀಡುವ ಹೊತ್ತಗೆಯೊಂದು ಪ್ರಕಟವಾಗಿದೆ.
      ಸ್ಥಳೀಯಾಡಳಿತೆ ಸಂಸ್ಥೆಗಳ ಸಿಬ್ಬಂದಿ, ಪೆÇಲೀಸ್ ಪಡೆ, ಜನಪ್ರತಿನಿ„ಗಳಿಗೆ, ಸಾರ್ವಜನಿಕರಿಗಾಗಿ ಈ ಪುಸ್ತಕ ಪ್ರಕಟಿಸಲಾಗಿದೆ. ಯಾವುದೆಲ್ಲ ಮಲಿನೀಕರಣ? ಯಾವ ಮಲಿನೀಕರಣಕ್ಕೆ ಯಾವ ಶಿಕ್ಷೆ ?ಯಾರಿಗೆಲ್ಲ ಶಿಕ್ಷೆ? ಯಾರಿಗೆ ಕ್ರಮಕೈಗೊಳ್ಳುವ ಅಧಿಕಾರವಿದೆ? ಯಾರೆಲ್ಲ ದೂರು ನೀಡಬಹುದು? ಇತ್ಯಾದಿ ವಿಷಯಗಳನ್ನೊಳಗೊಂಡ 56 ಪುಟಗಳಿರುವ ಪುಸ್ತಕ ಇದಾಗಿದೆ.
        ಜಲ ಮಲಿನೀಕರಣ(ನಿಯಂತ್ರಣ ಮತ್ತು ನಿವಾರಣೆ) ಕಾಯಿದೆ 1974, ಪರಿಸರ (ಸಂರಕ್ಷಣೆ) ಕಾಯಿದೆ1986, ಕೇರಳ ಪಂಚಾಯತ್ ರಾಜ್ ಕಾಯಿದೆ 1994, ಕೇರಳ ನಗರಸಭೆ ಕಾನೂನು 1994, ಭಾರತೀಯ ದಂಡ ಸಂಹಿತೆ, ಕೇರಳ ನೀರಾವರಿ ಮತ್ತು ಜಲಸಂರಕ್ಷಣೆ ಕಾನೂನು 2003, ಆಹಾರ ಸುರಕ್ಷೆ ಗುಣಮಟ್ಟ ಕಾನೂನು 2006, ಕೇರಳ ಪಂಚಾಯತ್ ಕಟ್ಟಡ ನಿರ್ಮಾಣ ಸಂಹಿತೆ, ಕೇರಳ ನಗರಸಭೆ ಕಟ್ಟಡ ನಿರ್ಮಾಣ ಸಂಹಿತೆ, ಘನ ಮಾಲಿನ್ಯ ಪರಿಷ್ಕರಣೆ ಸಂಹಿತೆ, ಕೇರಳ ಪೆÇಲೀಸ್ ಕಾಯಿದೆ ಸಹಿತ ಕಾನೂನು, ಸಂಹಿತೆಗಳ ಕುರಿತು ಈ ಹೊತ್ತಗೆ ಸಿದ್ಧವಾಗಿದೆ.
       ಸಾರ್ವಜನಿಕ ಪ್ರದೇಶಗಳಲ್ಲಿ ತ್ಯಾಜ್ಯ ಬಿಸುಟುವುದು, ಅವೈಜ್ಞಾನಿಕವಾಗಿ ತ್ಯಾಜ್ಯ ಉರಿಸುವುದು, ಸುರಕ್ಷಿತವಲ್ಲದ ರೀತಿಯ ತ್ಯಾಜ್ಯ ಪರಿಷ್ಕಾರ ನಡೆಸುವುದು, ನಿರ್ಲಕ್ಷ್ಯ ಮತ್ತು ಅಪಾಯಕರ ರೀತಿ ತ್ಯಾಜ್ಯಗಳನ್ನು ಹರಿಯಬಿಡುವುದು, ಮಲಿನಜಲ ಪರಿಷ್ಕರಣೆಗೆ ವ್ಯವಸ್ಥೆ ಮಾಡದೇ ಇರುವುದು, ಮಾಂಸದ ತ್ಯಾಜ್ಯಗಳನ್ನು ರಸ್ತೆ ಬದಿ, ಜಲಾಶಯಗಳಲ್ಲಿ ಬಿಸುಟುವುದು, ಶೌಚಾಲಯ ಸಹಿತ ಶುಚಿತ್ವ ವ್ಯವಸ್ಥೆ ಬೇಕಾದಷ್ಟು ಒದಗಿಸದೇ ಇರುವುದು, ಆಹಾರದಲ್ಲಿ ಆರೋಗ್ಯಕ್ಕೆ ಹಾನಿಕರ ಪದಾರ್ಥಗಳನ್ನು ಬೆರೆಸುವುದು, ಇಂಥಾ ಆಹಾರ ಪತ್ತೆಯಾದರೆ ಅದರ ವಿರುದ್ಧ  ಕ್ರಮ ಕೈಗೊಳ್ಳಬೇಕಾದ ಕ್ರಮ ಹೀಗೆ 29 ವಿಭಿನ್ನ ವಿಚಾರಗಳ ಕುರಿತು ಕಾನೂನು ಪರವಾದ ಸಲಹೆ ಇತ್ಯಾದಿಗಳನ್ನು ನೀಡಲಾಗಿದೆ. ಯಾವ ವಿಷಯದಲ್ಲಿ ಯಾವ ಇಲಾಖೆಯನ್ನು, ಯಾವ ಅಧಿಕಾರಿಯನ್ನು ಸಂಪರ್ಕಿಸಬೇಕು ಎಂಬುದನ್ನೂ ತಿಳಿಸಲಾಗಿದೆ.
       ತ್ಯಾಜ್ಯ ಸಂಬಂಧ ಪೆÇಲೀಸ್ ಇಲಾಖೆಯ ಸಿಬ್ಬಂದಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರಾಜ್ಯ ಪೆÇಲೀಸ್  ಮುಖ್ಯಸ್ಥರು ಪ್ರಕಟಿಸಿದ ಕಾರ್ಯಕಾರಿ ಡೈರೆಕ್ಟರಿಯಲ್ಲಿನ ಮಾಹಿತಿಗಳನ್ನೂ ಈ ಪುಸ್ತಕದಲ್ಲಿ ಸೇರ್ಪಡೆಗೊಳಿಸಲಾಗಿದೆ. ಕಾನೂನು ಉಲ್ಲಂಘನೆ ಪತ್ತೆ, ಜನಜಾಗೃತಿ ನಡೆಸುವುದು, ಮುನ್ನೆಚ್ಚರಿಕೆ ನೀಡಿಕೆ, ಕಾನೂನು ಕ್ರಮ ಸ್ವೀಕಾರದ ಕ್ರಮ, ಸ್ಟೇಷನ್ ಹೌಸ್ ಆಫೀಸರ್ ಹೊಣೆಗಾರಿಕೆ, ಸಂಬಂ„ತ ಏಜೆನ್ಸಿಗಳು, ಇಲಾಖೆಗಳ ಏಕೀಕರಣ, ಸ್ವೀಕರಿಸಬೇಕಾದ ಕ್ರಮಗಳ ಕುರಿತು ಹಿರಿಯ ಅ„ಕಾರಿಗೆ ವರದಿ ಸಲ್ಲಿಕೆ, ಸರ್ಕಲ್ ಇನ್ಸ್‍ಪೆಕ್ಟರ್‍ರ ಹೊಣೆಗಾರಿಕೆ ಇತ್ಯಾದಿ ವಿಷಯಗಳನ್ನು ಒದಗಿಸಲಾಗಿದೆ.
      ಸ್ಥಳೀಯಾಡಳಿತೆ ಸಂಸ್ಥೆಗಳ ಕಾರ್ಯದರ್ಶಿಗಳು ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ತತ್ಸಂಬಂಧ ಸಹಾಯಕ ವಿಚಾರಗಳು ಇಲ್ಲಿ ತಿಳಿಸಲಾಗಿದೆ. ಮಾದರಿ ಅರ್ಜಿಗಳು, ದೂರು ನೀಡಿಕೆಯ ಮಾದರಿ ಇತ್ಯಾದಿಗಳನ್ನೂ ಇಲ್ಲಿ ಪ್ರಕಟಿಸಲಾಗಿದೆ. ಒಟ್ಟಿನಲ್ಲಿ ಇದು ಬಹುಜನೋಪಯೋಗಿ ಪುಸ್ತಕವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries