ನವದೆಹಲಿ: 21ನೇ ಶತಮಾನದಲ್ಲಿ ಬಾರತ ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಲಿದೆ ಎನ್ನುವ ವಿಶ್ವಸಂಸ್ಥೆಯ ಕಲ್ಪನೆ ನಿಜವಾಗುವ ಕಾಲ ದೂರವಿಲ್ಲ.ಏಕೆಂದರೆ ಹೊಸ ವರ್ಷವಾದ ನಿನ್ನೆ (ಜನವರಿ 1) ಭಾರತದಲ್ಲಿ ಬರೋಬ್ಬರಿ 69,944 ಮಕ್ಕಳ ಜನನವಾಗಿದೆ.ಇದು ಜಗತ್ತಿನಾದ್ಯಂತ ಜನ್ಮಿಸಿದ ಮಕ್ಕಳಲ್ಲಿ ಶೇ.18ರಷ್ಟು ಆಗಿದೆ.
ವಿಶ್ವಸಂಸ್ಥೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಹೊಸ ವರ್ಷದ ದಿನ ಭಾರತದಲ್ಲಿ 69,944 ಮಕ್ಕಳು ಜನ್ಮಿಸಿದ್ದಾರೆ. ಇನ್ನು ಚೀನಾ ಹಾಗೂ ನೈಜೀರಿಯಾ ರಾಷ್ಟ್ರಗಳಲ್ಲಿ ಕ್ರಮವಾಗಿ 44,940 ಹಾಗೂ 25,685 ಮಕ್ಕಳು ಹುಟ್ಟಿದ್ದಾರೆ.
ಈ ಹೊಸ ವರ್ಷದ ದಿನ ನಾವು ಪ್ರತಿ ಬಾಲಕ, ಬಾಲಕಿಯರ ಪ್ರತಿ ಹಕ್ಕನ್ನು ಪೂರೈಸುವ ನಿರ್ಣಯವನ್ನು ನಾವು ಕೈಗೊಳ್ಳೋಣಎಲ್ಲರಿಗೆ ಬದುಕುವ ಹಕ್ಕು ಕಲ್ಪಿಸೋಣ ಎಂದು ಯುನಿಸೆಫ್ ಇಂಡಿಯಾ ಪ್ರತಿನಿಧಿ ಯಸ್ಮಿನ್ ಅಲಿ ಹಕ್ ಹೇಳಿದ್ದಾರೆ.
ಭಾರತದ ಸಾಂಪ್ರದಾಯಿಕ ವೈರಿ ಪಾಕಿಸ್ತಾನದಲ್ಲಿ ಹೊಸ ವರ್ಷದ ಮೊದಲ ದಿನ 15,112 ಮಕ್ಕಳು ಜನ್ಮಿಸಿದ್ದರೆ ಇಂಡೋನೇಷ್ಯಾ (13,256 ಮಕ್ಕಳು), ಅಮೆರಿಕ ಸಂಯುಕ್ತ ಸಂಸ್ಥಾನ (1,086 ಮಕ್ಕಳು), ಕಾಂಗೋ ಗಣರಾಜ್ಯ (10,053 ಶಿಶುಗಳು) ಮತ್ತು ಬಾಂಗ್ಲಾದೇಶ (8,428 ಮಕ್ಕಳು) ನಂತರದ ಸ್ಥಾನಗಳಲ್ಲಿದೆ.
ಸುಮಾರು 1.3 ಶತಕೋಟಿ ಜನಸಂಖ್ಯೆ ಹೊಂದಿರುವ ಚೀನಾಗೆ ಹೋಲಿಸಿದರೆ ಭಾರತ ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ.ಯುಎನ್ ಅಂದಾಜಿನ ಪ್ರಕಾರ, 2024 ರ ಹೊತ್ತಿಗೆ ಭಾರತದ ಜನಸಂಖ್ಯೆಯು ಚೀನಾವನ್ನು ಹಿಂದಿಕ್ಕಲಿದೆ.