HEALTH TIPS

ಮಂಜೇಶ್ವರ ಶ್ರೀ ಶನೈೀಶ್ಚರ ಮಂದಿರದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ಬಲಿ ಉತ್ಸವ


                 ಮಂಜೇಶ್ವರ: ಬೀಚ್ ರೋಡ್‍ನಲ್ಲಿರುವ ಶ್ರೀ ಶನೈೀಶ್ಚರ ಮಂದಿರದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ಬಲಿ ಉತ್ಸವ ಬ್ರಹ್ಮಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿಯವರ ದಿವ್ಯ ಉಪಸ್ಥಿತಿಯಲ್ಲಿ ಜ.  19ರಿಂದ ಮೊದಲ್ಗೊಂಡು 21ರವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
            ಆ ಪ್ರಯಕ್ತ ಜ.19ರಂದು ಶನಿವಾರ ಸಂಜೆ 4ಕ್ಕೆ  ಮಂಜೇಶ್ವರ ಶ್ರೀ ಶಾಸ್ತವೇಶ್ವರ ದೇವಸ್ಥಾನದಿಂದ ಕ್ಷೇತ್ರಕ್ಕೆ ಹೊರೆಕಾಣಿಕೆ ಮೆರವಣಿಗೆ, ಸಂಜೆ 6.30ಕ್ಕೆ ಸಾಮೂಹಿಕ ಪ್ರಾರ್ಥನೆ ಹಾಗೂ ವಿವಿಧ ವೈದಿಕ ಕಾರ್ಯಕ್ರಮಗಳು, 20ರಂದು ಬೆಳಿಗ್ಗೆ 9.ಕ್ಕೆ ದ್ವಾದಶ ನಾಳೀಕೇರ ಗಣಯಾಗ, ಸಗ್ರಹ ಶನಿಶಾಂತಿ, ಆಶ್ಲೇಷ ಬಲಿ, ಬಿಂಬಶುದ್ಧಿ, ತತ್ವ ಹೋಮ, 12.30ಕ್ಕೆ ಅನ್ನ ಸಂತರ್ಪಣೆ, 11.ರಿಂದ 2.ರ ವರೆಗೆ ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ರಾಗಸುಧಾ ಹೊಸಂಗಡಿ ಇದರ  ಶಿಲ್ಪಾ ಭಟ್ ಮತ್ತು ಶಿಷ್ಯರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ 6.ಕ್ಕೆ ಬೆಳ್ಳಿ ರಥ ಶುದ್ಧಿ ಕಲಶಾಧಿವಾಸ, ಅಧಿವಾಸ ಹೋಮ, 6.30ರಿಂದ ಎನ್.ಕೆ ರಾಜ ಶಂಕರ ಬೆಂಗಳೂರು ಹಾಗೂ ಜಾನ್ಸಿ ಫ್ರೆಂಡ್ ಮಂಜೇಶ್ವರ ಇವರಿಂದ ಸಹಸ್ರ ದೀಪೋತ್ಸವ, ಸಂಜೆ 7.30ರಿಂದ ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಮಹಿಳಾ ಯಕ್ಷಕೂಟ ಪೊನ್ನೆತ್ತೋಡು ಕಯ್ಯಾರ್ ಇವರಿಂದ 'ಶ್ರೀಕೃಷ್ಣ ಪರಂಧಾಮ' ಎಂಬ ಯಕ್ಷಗಾನ ತಾಳ ಮದ್ದಳೆ, ರಾತ್ರಿ 9.ರಿಂದ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಪ್ರದರ್ಶನ,
       21ರಂದು ಸೋಮವಾರ ಬೆಳಿಗ್ಗೆ 7.30ಕ್ಕೆ ಕಲಶಪೂಜೆ, 8.28ಕ್ಕೆ ಕುಂಭ ಲಗ್ನದಲ್ಲಿ ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ, 10.00 ಗಂಟೆಗೆ ಅವಸ್ರುತ ಬಲಿ, ಬೆಳ್ಳಿ ಗಧರಥ ಸಮರ್ಪಣೆ, ಬೆಳ್ಳಿ ರಥೋತ್ಸವ, ಪಲ್ಲಪೂಜೆ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ ಮಧ್ಯಾಹ್ನ 12. ರಿಂದ ಉಡುಪಿಯ ಆಕಾಶವಾಣಿ ಕಲಾವಿದ ಮಧೂರು ನಾರಾಯಣ ಸರಾಳಯರಿಂದ ಭಜನೆ ಸಂಕಿರ್ತನೆ, ದಾಸ ಲಹರಿ ಮಧ್ಯಾಹ್ನ 12.30ರಿಂದ ಅನ್ನ ಸಂತರ್ಪಣೆ, ಸಂಜೆ 5ಕ್ಕೆ ದೇವರಿಗೆ ರಂಗಪೂಜೆ, 6.ಕ್ಕೆ ಶ್ರೀ ದೇವರ ಬಲಿ ಹೊರಡುವುದು, ರಾತ್ರಿ 8.ಕ್ಕೆ ಶ್ರೀ ದೇವರ ರಥಾರೋಹಣ, ರಥೋತ್ಸವ ಶ್ರೀ ಶಾಸ್ತವೇಶ್ವರ ದೇವಸ್ಥಾನದಲ್ಲಿ ಕಟ್ಟೆಪೂಜೆ, ಪುನಃ ಕ್ಷೇತ್ರಕ್ಕೆ ಬಂದು ವಸಂತ ಕಟ್ಟೆ ಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6.30ಕ್ಕೆ ಮುಖ್ಯ ಅತಿಥಿಗಳ ಆಗಮನ ನಡೆಯಲಿದೆ. ಚಲನಚಿತ್ರ ನಟ ಚಿನ್ನಾರಿಮುತ್ತ ಖ್ಯಾತಿಯ ವಿಜಯ ರಾಘವೇಂದ್ರ, ತಿಲಕ್ ಶೇಖರ್ ಬೆಂಗಳೂರು, ಜಯಪ್ರಕಾಶ್ ಶೆಟ್ಟಿ , ವಿಕ್ರಮ್ ಸೂರಿ ನಮಿತರಾವ್ ಬೆಂಗಳೂರು, ನಾಗಿಣಿ ಖ್ಯಾತಿಯ ದೀಪಿಕದಾಸ್ ಬೆಂಗಳೂರು, ಸತ್ಯನಾರಾಯಣ ರಾವ್ ಹಾಸನ, ಅಶ್ವಿನಿ ಮಂಜುನಾಥ್ ಸಕಲೇಶ್‍ಪುರ, ದಿವ್ಯ ದೇವದಾಸ್ ರಾವ್ ಪುಣೆ, ಚೈತ್ರ ಬೈರೇಗೌಡ ಆರ್ ನೆಲಮಂಗಲ, ನರಹರಿ ಸುಷ್ಮಾ ಪ್ರಭು ಮಂಗಳೂರು, ಎನ್.ಕೆ ರಾಜ ಶಂಕರ ಬೆಂಗಳೂರು, ಮೊದಲಾದವರು ಭಾಗವಹಿಸುವರು. ಈ ವೇಳೆ ಮಠದ ಶಿಲ್ಪಿ ದಯಾನಂದ ಆಚಾರ್ಯ ಹಾಗೂ ಬೆಳ್ಳಿಯ ಶಿಲ್ಪಿ ದಿವಾಕರ ಆರ್ಚಾಯರವರಿಗೆ ಗೌರವಾರ್ಪಣೆ ನಡೆಯಲಿದೆ. ಬಳಿಕ ವಿಕ್ರಮ್ ಸೂರಿ ನಮಿತರಾವ್ ಇವರಿಂದ ನೃತ್ಯ ಪ್ರದರ್ಶನ, ರಸಮಂಜರಿ, ಡ್ಯಾನ್ಸ್ ಯನ್ ಬೀಟ್ಸ್ ಇವರಿಂದ ನೃತ್ಯ ಪ್ರದರ್ಶನ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries