HEALTH TIPS

ಕಲೆಯ ಬಗ್ಗೆ ಆಸಕ್ತಿ ಹಾಗೂ ಕುತೂಹಲ ಇರುವ ಸಹೃದಯನಿಗೆ ಮಾತ್ರ ರಸಾಸ್ವಾದನೆ ಸಾಧ್ಯ-ಡಾ ಎಂ. ಪ್ರಭಾಕರ ಜೋಶಿ

 
        ಕಾಸರಗೋಡು: ಕಲೆಯ ಬಗ್ಗೆ ಆಸಕ್ತಿ ಹಾಗೂ ಕುತೂಹಲ ಇರುವ ಸಹೃದಯನಿಗೆ  ಮಾತ್ರ ರಸಾಸ್ವಾದನೆ ಸಾಧ್ಯ. ಕಲೆಯನ್ನು ವೀಕ್ಷಿಸುವ ಒಳಗಿನ ಕಣ್ಣು ಜಾಗೃತವಾದಾಗಲೇ ಕಲೆ ನಮ್ಮನ್ನು ಹೆಚ್ಚು ತಿಳಿಯುವಂತೆ ಮಾಡುತ್ತದೆ ಎಂದು ವಿದ್ವಾಂಸ ಡಾ ಎಂ. ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು.
        ಕಣ್ಣೂರು ವಿಶ್ವವಿದ್ಯಾನಿಲಯದ ಭಾರತೀಯ ಭಾಷಾ ಅದ್ಯಯನಾಂಗ ಹಾಗೂ ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರದ ಆಶ್ರಯದಲ್ಲಿ ವಿದ್ಯಾನಗರ ಚಾಲ ಕೇಂದ್ರದಲ್ಲಿ ನಡೆದ 'ಯಕ್ಷಗಾನ ರಸಾಸ್ವಾದನೆ ಮತ್ತು ಪುಸ್ತಕ ವಿಮರ್ಶೆ' ಕಾರ್ಯಕ್ರಮದಲ್ಲಿ ಅವರು 'ಯಕ್ಷಗಾನ ರಸಾಸ್ವಾದನೆ' ಎಂಬ ವಿµಯದಲ್ಲಿ ವಿಶೇಷೋಪನ್ಯಾಸ ನೀಡಿ ಮಾತನಾಡಿದರು.
     ಪ್ರತಿಯೊಂದು ಕಲೆಯಲ್ಲೂ ಅಭಿವ್ಯಕ್ತಿ ವಿಧಾನಗಳು ವಿಭಿನ್ನವಾಗಿರುತ್ತವೆ. ಅದೇ ರೀತಿಯಲ್ಲಿ ರಸ, ಧ್ವನಿ,ಅಲಂಕಾರ. ಅಭಿನಯ ಇನ್ನಿತ್ಯಾದಿಗಳಲ್ಲೂ ವ್ಯತ್ಯಾಸಗಳಿರುತ್ತವೆ. ಆಸ್ವಾದನೆಯ ರೀತಿಯೂ ಕಲೆಯಿಂದ ಕಲೆಗೆ ವಿಭಿನ್ನವಾಗಿರುತ್ತದೆ. ಒಂದು ಕಲೆಯನ್ನು ಅರ್ಥಮಾಡುವುದೆಂದರೆ ಆ ಕಲೆಯ ಘಟನೆಗಳನ್ನು ಅರ್ಥಮಾಡುವುದೆಂದರ್ಥ. ಕವಿಭಾವನೆಗಳನ್ನು ಸರಿಯಾಗಿ ಅರ್ಥೈಸಿಕೊಂಡು ಕವಿಯ ಊಹನೆಗಿಂತಲೂ ಮಿಗಿಲಾಗಿ ಯೋಚಿಸುವವನು ಆ ಮೂಲಕ ಆಸ್ವಾದನೆ ಮಾಡುವವನನ್ನು ಉತ್ತಮ ಸಹೃದಯನೆನ್ನಬಹುದು. ಯಕ್ಷಗಾನವು ವೇಷ, ನಾಟ್ಯ, ಅಭಿನಯ, ಸಂಭಾಷಣೆ ಗಳ ಮೂಲಕ ಸಹ್ಲದಯನ ರಸಾಸ್ವಾದನೆಗೆ ಹಚ್ಚು ಅನೂಕೂಲ ಪರಿಸರವನ್ನೊದಗಿಸುತ್ತದೆ.  ತಾಳಮದ್ದಳೆಯೂ ಸರ್ವಶ್ರೇಷ್ಠ ವಾಙ್ಮಯಗಳಲ್ಲಿ ಒಂದು. ಮಾತು ಹಾಗೂ ಶೈಲಿ ಇಲ್ಲಿ ರಸಾಸ್ವಾದನೆಯ ಕೇಂದ್ರಗಳು. ಯಕ್ಷಗಾನದಲ್ಲಿ ಹಾಸ್ಯವು ಕತೆಯ ಭಾಗವಾಗಿ ಬರಬೇಕು. ಅನುಕರಣೆಗಳು ಕೆಲವೊಮ್ಮೆ ರಸಾಸ್ವಾದನೆಗೆ ತೊಡಕಾಗುತ್ತವೆ." ಎಂದು ಡಾ. ಎಂ. ಪ್ರಭಾಕರ ಜೋಶಿ ನುಡಿದರು.
         ಪುತ್ತೂರು ಅಂಬಿಕಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪರೀಕ್ಷಿತ್ ತೋಳ್ಪಾಡಿ ಅವರು ಡಾ ಸುಂದರ ಕೇನಾಜೆ ಬರೆದ 'ಜೋಶಿ ಆಳ ಮನದಾಳ' ಎಂಬ ಕೃತಿಯ ಕುರಿತು ಮಾತನಾಡಿ, "ವ್ಯಕ್ತಿಯ ಪರಿಚಯಾತ್ಮಕ ವಿವರಗಳನ್ನು ವಿಭಿನ್ನ ರೀತಿಯಲ್ಲಿ ನೀಡುವುದರ ಜತೆಗೆ ಯಕ್ಷಗಾನದ ಹಲವು ಚಿಂತನೆಗಳನ್ನು ಪಡಿಮೂಡಿಸುವುದರಲ್ಲಿ ಕೃತಿ ಯಶಸ್ವಿಯಾಗಿದೆ. ಬುದ್ಧಿಭಾವಗಳ ಸಮತೋಲನವನ್ನು ಕೇನಾಜೆಯವರು ಕೃತಿಯಲ್ಲಿ ಕಾಯ್ದುಕೊಂಡಿದ್ದಾರೆ. ಕಲೆಯನ್ನು ಆರಾಧ್ಯಭಾವದಿಂದ ನೋಡಿಕೊಂಡಿರುವ ಜೋಶಿಯನ್ನು ಪರಿಚಿಯಿಸುವ ಮೂಲಕ ಯಕ್ಷಗಾನದ ಆಳ ಅಗಲಗಳನ್ನು ಚಿತ್ರಿಸುವಲ್ಲಿ ಪುಸ್ತಕ ಯಶಸ್ವಿಯಾಗಿದೆ ಎಂದರು.
    ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿದ ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ ಅರವಿಂದ ಕೃಷ್ಣನ್ ಮಾತನಾಡಿ,  ಸರಕಾರದ ಅನುದಾನವಿಲ್ಲದಿದ್ದರೂ ಸಂಶೋಧನ ಕೇಂದ್ರವು ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ವಿದ್ಯಾರ್ಥಿಗಳಿಗೆ, ಸಂಶೋಧನಾಸಕ್ತರಿಗೆ ಅನುಕೂಲ ವಾತಾವರಣವನ್ನೊದಗಿಸುತ್ತಿದೆ ಎಂದರು.
    ಕಣ್ಣೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ರಾಜು ಎಂ.ಸಿ, ಕನ್ನಡ ವಿಭಾಗದ ಮುಖ್ಯಸ್ಥೆ ಸ್ಮಜಾತಾ ಎಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಭಾರತೀಯ ಭಾಷಾ ಅಧ್ಯಯನಾಂಗ ಕನ್ನಡ ವಿಭಾಗದ ನಿರ್ದೇಶಕ ಡಾ ರಾಜೇಶ್ ಬೆಜ್ಜಂಗಳ ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿ ಮಾತನಾಡಿದರು. ಡಾ. ಸುಂದರ ಕೇನಾಜೆ, ಮೈಸೂರಿನ ಎಂ ಸಿ ಮನೋಹರ್ ಈ ಮುಂತಾದವರು ಮಾತನಾಡಿದರು.
     ಯಕ್ಷಗಾನ ಸಂಶೋಧನ ಕೇಂದ್ರದ ಸಂಯೋಜನಾಧಿಕಾರಿ ಡಾ. ರತ್ನಾಕರ ಮಲ್ಲಮೂಲೆ ಸ್ವಾಗತಿಸಿ, ಕೇಂದ್ರದ ವಕ್ತಾರೆ ಸವಿತಾ ಬಿ ವಂದಿಸಿದರು. ಪ್ರದೀಪ್ ಬಿ ಎಸ್, ಸುಜಿತ್ ಉಪ್ಪಳ ಕಾರ್ಯಕ್ರಮ ನಿರೂಪಿಸಿದರು. ಬಿಎಡ್, ಎಂ.ಎ, ಎಂಫಿಲ್, ಪಿಎಚ್ ಡಿ ವಿದ್ಯಾರ್ಥಿಗಳು ಸಹೃದಯರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries