ಕಾಸರಗೋಡು: ವೆಳ್ಳಿಕೋತ್ ಇನ್ಸ್ಸ್ಟಿಟ್ಯೂಟ್ ನಲ್ಲಿ ನಡೆಸಲಾಗುವ ಡಿಜಿಟಲ್ ವೀಡಿಯೋಗ್ರಫಿ ಆಂಡ್ ಮೋಡೆಲ್ ಫೊಟೋಗ್ರಫಿಯ ಉಚಿತ ತರಬೇತಿಗೆ ಅರ್ಜಿ ಕೋರಲಾಗಿದೆ.
ತರಬೇತಿ ಮತ್ತು ಭೋಜನ ಉಚಿತವಾಗಿರುವುದು. ಹತ್ತನೇ ತರಗತಿ ವರೆಗೆ ಕಲಿತ 20ರಿಂದ 45 ವರ್ಷ ಪ್ರಾಯದ ಮಂದಿ ಅರ್ಜಿ ಸಲ್ಲಿಸಬಹುದು. ಅರ್ಜಿಯೊಂದಿಗೆ ಪೂರ್ಣ ವಿಳಾಸ, ಜನನದಿನಾಂಕ, ಶಿಕ್ಷಣಾರ್ಹತೆ, ದೂರವಾಣಿ ನಂಬ್ರ ಇತ್ಯಾದಿ ಇರಬೇಕು. ಜ.21ರ ಮುಂಚಿತವಾಗಿ ಅರ್ಜಿಯನ್ನು ವೆಳ್ಳಿಕೋತ್ ಇನ್ಸ್ಸ್ಟಿಟ್ಯೂಟ್, ಆನಂದಾಶ್ರಮಂ, ಪಿ.ಒ.ಕಾ?ಂಗಾಡ್, ಪಿನ್-671531 ಎಂಬ ವಿಳಾಸಕ್ಕೆ ಯಾ bired2003@gmail.comಎಂಬ ಇ-ಮೇಲ್ ವಿಳಾಸಕ್ಕೆ ಕಳುಹಿಸಬೇಕು. ಮಾಹಿತಿಗೆ ದೂರವಾಣಿ ಸಂಖ್ಯೆ: 9809952778,0467-2268240 ಸಂಪರ್ಕಿಸಬಹುದು.