ಕುಂಬಳೆ: ಕೋಟೆಕ್ಕಾರಿನ ಶ್ರೀಮೈಸಂದಾಯ ದೈವಸ್ಥಾನದಲ್ಲಿ ಮೈಸಂದಾಯ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವವು ಜ.27 ರಿಂದ30ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಜ.27 ರಂದು ಸಂಜೆ 5ಕ್ಕೆ ತಂತ್ರವರ್ಯರ ಆಗಮನ, ಪೂರ್ಣಕುಂಭ ಸ್ವಾಗತ,ಕೋಟೆಕ್ಕಾರ್ ಭಾರ್ಗವ ಫ್ರೆಂಡ್ಸ್ ಸದಸ್ಯರಿಂದ ಹೊರೆಕಾಣಿಕೆ ಮೆರವಣಿಗೆ ದೈವ ಕ್ಷೇತ್ರಕ್ಕೆ ಆಗಮಿಸಲಿದೆ. ಸಂಜೆ 6ಕ್ಕೆ ಉಗ್ರಾಣ ಮುಹೂರ್ತ, ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಸ್ಥಳಶುದ್ದಿ, ಪ್ರಾಸಾದಶುದ್ದಿ, ವಾಸ್ತುಹೋಮ, ರಾಕ್ಷೋಘ್ನ ಹೋಮ, ವಾಸ್ತುಬಲಿ, ಪ್ರಾಕಾರ ಬಲಿ ನಡೆಯಲಿದೆ.
ಜ.28 ರಂದು ಸೋಮವಾರ ಬೆಳಿಗ್ಗೆ7ಕ್ಕೆ ಗಣಪತಿ ಹವನ, 8ಕ್ಕೆ ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಬಳಿಕ 9 ರಿಂದ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ, 12 ರಿಂದ ಮಹಾಪೂಜೆ, ನಿತ್ಯ ನೈಮಿತ್ತಿಕ ನಿರ್ಣಯ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ 3ಕ್ಕೆ ಸ್ಥಾನದ ಗುಳಿಗನ ಕೋಲ, 4.30ಕ್ಕೆ ಮೊಗೇರ ತಂಬಿಲ ನಡೆಯಲಿದೆ. ಸಂಜೆ 5.30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಜೀಣೋದ್ದಾರ ಸಮಿತಿ ಅಧ್ಯಕ್ಷ ರಾಮಚಂದ್ರ ಗಟ್ಟಿ ಕೋಟೆಕ್ಕಾರ್ ಅಧ್ಯಕ್ಷತೆ ವಹಿಸುವರು. ಕ್ಷೇತ್ರದ ತಂತ್ರಿವರ್ಯ ಉಳಾಲು ಬೂಡು ಪ್ರಕಾಶ ಕಡಮಣ್ಣಾಯ ಉಪಸ್ಥಿತರಿರುವರು. ಉಪ್ಲೇರಿ ಶ್ರೀಮಂತ್ರಮೂರ್ತಿ ಗುಳಿಗ ಸನ್ನಿಶಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಧಾರ್ಮಿಕ ಉಪನ್ಯಾಸ ನೀಡುವರು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಸತ್ಯಶಂಕರ ಭಟ್, ಅಧ್ಯಕ್ಷ ತ್ಯಾಂಪಣ್ಣ ರೈ, ಗ್ರಾ.ಪಂ. ಸದಸ್ಯ ಹರೀಶ್ ಗಟ್ಟಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕರ್ತೆ ಲತಾ ಮಹಾಬಲ ಭಂಡಾರಿ, ಆನಂದ ಮವ್ವಾರು, ಪ್ರದೀಪ್ ಗಟ್ಟಿ, ರಾಮಚಂದ್ರ ಪೂಜಾರಿ, ಈಶ್ವರ ಕೆ, ಕಮಲಾಕ್ಷಿ, ಕಮಲಾಕ್ಷ ಮೊದಲಾದವರು ಉಪಸ್ಥಿತರಿರುವರು. ರಾತ್ರಿ 8ಕ್ಕೆ ಅನ್ನದಾನ, 8.30 ರಿಂದ ಮೈಸಂದಾಯ ದೈವದಕೋಲ ನಡೆಯಲಿದೆ. ಜ.29 ರಂದು ಬೆಳಿಗ್ಗೆ6ಕ್ಕೆ ಪಂಜುರ್ಲಿ ದೈವದ ಕೋಲ, 11 ರಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ಅನ್ನದಾನ, ಸಂಜೆ 6 ರಿಂದ ಭಜನಾ ಸಂಕೀರ್ತನೆ, ರಾತ್ರಿ 9ರಿಂದ ಕಲ್ಲಡ್ಕದ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ, ರಾತ್ರಿ 8 ರಂದ ಅನ್ನದಾನ, 11 ರಿಂದ ಮಂಜಿರಮುಂಡ್ಯ ಗುಳಿಗನ ಕೋಲ, ಕೊರತಿ ದೈವದ ಕೋಲ ನಡೆಯಲಿದೆ. ಜ.30ರಂದು ಬೆಳಿಗ್ಗೆ 10ಕ್ಕೆ ಲಕ್ಕೀ ಕೂಪನ್ ಡ್ರಾ, ಸಂಜೆ7 ರಿಂದ ಸುದರ್ಶನ ಹೋಮ, ಪ್ರಾತಾವಾಹನೆ ನಡೆಯಲಿದೆ.