ಕಾಸರಗೋಡು: ಜಿಲ್ಲಾ ಶಿಶು ಕಲ್ಯಾಣ ಸಮಿತಿ ವಿವಿಧ ಚಟುವಟಿಕೆಗಳಿಗೆ ರೂಪು ನೀಡಿದೆ. ಜಿಲ್ಲೆಯ ಶಿಶುಕಲ್ಯಾಣ ಚಟುವಟಿಕೆಗಳಿಗೆ ಮತ್ತು ವಿದ್ಯಾರ್ಥಿಗಳ ಕಲ್ಯಾಣಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈ ಚಟುವಟಿಕೆಗಳು ನಡೆಯಲಿವೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಅಧ್ಯಕ್ಷತೆ ವಹಿಸಿದ್ದರು. ಇದರ ಅಂಗವಾಗಿ ಪಾಲಕುನ್ನುನಲ್ಲಿ ಜಿಲ್ಲಾ ಶಿಶು ಪರಿಪಾಲನಾ ಕೇಂದ್ರ ಈ ತಿಂಗಳ ಕೊನೆಯಲ್ಲಿ ಉದ್ಘಾಟನೆಗೊಳ್ಳಲಿದೆ. ರಾಜ್ಯ ಶಿಶು ಕಲ್ಯಾಣ ಸಮಿತಿಯ ಮೇಲ್ನೋಟದಲ್ಲಿ ಈ ಕೇಂದ್ರ ಚಟುವಟಿಕೆ ನಡೆಸಲಿದೆ. ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪುತ್ತಿಗೆಯಲ್ಲಿ ಶೀಘ್ರದಲ್ಲಿ ವಿಜ್ಞಾನ ಜಾಗೃತಿ ಸಹವಾಸ ಶಿಬಿರ ನಡೆಸಲಾಗುವುದು. ಸಂವಿಧಾನದ ಕುರಿತೂ ಪ್ರತ್ಯೇಕ ತರಗತಿಗಳು ನಡೆಯಲಿವೆ.
ಮಧುರಂ ಪ್ರಭಾತಂ ಯೋಜನೆ ಜಿಲ್ಲೆಯಲ್ಲಿ ಈ ಶೈಕ್ಷಣಿಕ ವರ್ಷವೇ ನಡೆಸಲು ನಿರ್ಧರಿಸಲಾಗಿದೆ. ಸತತವಾಗಿ ಬೆಳಗ್ಗಿನ ಉಪಹಾರ ಸೇವಿಸದೇ ಶಾಲೆಗೆ ಬರುತ್ತಿರುವ ಮಕ್ಕಳನ್ನು ಪತ್ತೆಮಾಡಿ, ಅವರಿಗೆ ಹೊಟೇಲ್ ಆ್ಯಂಡ್ ರೆಸ್ಟಾರೆಂಟ್ ಅಸೋಸಿಯೇಶನ್ ಮತ್ತು ಕುಟುಂಬಶ್ರೀ ಸಹಕಾರದೊಂದಿಗೆ ಬೆಳಗ್ಗಿನ ಉಪಹಾರ ಒದಗಿಸಲಾಗುವುದು. ಮಂಜೇಶ್ವರ, ಕಯ್ಯೂರು-ಚೀಮೇನಿ, ಬಳಾಲ್, ವಲಿಯಪರಂಬ, ವೆಸ್ಟ್ ಏಳೇರಿ ಸಹಿತ ಗ್ರಾಮಪಂಚಾಯತ್‍ಗಳಲ್ಲಿ ಈ ಯೋಜನೆ ಪ್ರಥಮ ಹಂತ ರೂಪದಲ್ಲಿ ಜಾರಿಗೊಳ್ಳಲಿದೆ.
ಜಿಲ್ಲಾ ಶಿಶು ಕಲ್ಯಾಣ ಸಮಿತಿ ಕಾರ್ಯದರ್ಶಿ ಮಧು ಮುದಿಯಕ್ಕಾಲ್, ಜಿಲ್ಲಾ ಮಾಹಿತಿ ಅ„ಕಾರಿ ಎಂ.ಮಧುಸೂದನನ್, ರಾಜ್ಯ ಶಿಶುಕಲ್ಯಾಣ ಸಮಿತಿ ಕಾರ್ಯಕಾರಿ ಸದಸ್ಯ ಒ.ಎಂ.ಬಾಲಕೃಷ್ಣನ್, ಜಿಲ್ಲಾ ಉಪಾಧ್ಯಕ್ಷೆ ಎಂ.ಪಿ.ವಿ.ಜಾನಕಿ, ಅಜಯನ್ ಪನೆಯಾಲ್, ಕುತ್ತೂರ್ ಕಣ್ಣನ್, ಪಿ.ವಿ.ಶ್ರೀಖಾ, ಪಿ.ಕೆ.ರಘುನಾಥನ್, ಪಿ.ಕೆ.ಲಕ್ಷ್ಮಿ, ಪಿ.ವಿ.ಜಿಷಾ, ಎಂ.ಲಕ್ಷ್ಮಿ ಮೊದಲಾದವರು ಉಪಸ್ಥಿತರಿದ್ದರು.