ಉಪ್ಪಳ: ಬಾಯಾರು ಬದಿಯಾರು ದೈವಸ್ಥಾನದಲ್ಲಿ ವರ್ಷಾವಧಿ ಬಂಡಿಮಾರು ನೇಮವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಮಾಪ್ತಿಗೊಂಡಿತು. ಶುಕ್ರವಾರದಂದು ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬಲಿವಾಡು ಕೂಟ ಸಮಾರಾಧನೆ, ಅದೇ ದಿನ ರಾತ್ರಿ ಮಂಡಲಪೂಜೆ, ದೀಪಗಳ ಅಲಂಕಾರದೊಂದಿಗೆ ರಂಗಪೂಜೆ ನಡೆದು ಪ್ರಸಾದ ಭೋಜನ ಏರ್ಪಟ್ಟಿತು. ಶನಿವಾರ ಅಪರಾಹ್ನ ಮಲರಾಯಾದಿ ದೈವಗಳ ಬಂಡಿಮಾರು ನೇಮವು ಶ್ರದ್ಧಾ ಭಕ್ತಿಯಿಂದ ಜರುಗಿತು. ಬಂಡಿಮಾರು ನೇಮವನ್ನು ವೀಕ್ಷಿಸಿದ ಭಕ್ತರು ಕಾಣಿಕೆ ಸಮರ್ಪಿಸಿ ಪ್ರಸಾದ ಸ್ವೀಕರಿಸಿದರು.
ಬಂಡಿಮಾರು ನೇಮ ಸಮಾಪ್ತಿ
0
ಜನವರಿ 07, 2019