ಮುಳ್ಳೇರಿಯ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮವ್ವಾರು ಒಕ್ಕೂಟದ ಪ್ರಗತಿಬಂಧು ತುಳನಾಡ ತುಡರ್ ಮತ್ತು ಶ್ರೀಹರಿ ಸ್ವ-ಸಹಾಯ ಸಂಘದ ನೇತೃತ್ವದಲ್ಲಿ ಶ್ರೀ ಮಹಿಸಂದಾಯ ಮೂಕಾಂಬಿಕ ಗುಳಿಗ ಹಾಗೂ ಪರಿವಾರ ದೈವಸ್ಥಾನಕ್ಕಿರುವ ದಾರಿ ಶ್ರಮದಾನ ಇತ್ತೀಚೆಗೆ ನಡೆಯಿತು.
ಮವ್ವಾರು ಒಕ್ಕೂಟದ ಅಧ್ಯಕ್ಷ ಕೊರಗಪ್ಪ ಬೆಳ್ಳಿಗೆ ಉದ್ಘಾಟಿಸಿದರು. ತುಳುನಾಡ ತುಡರ್ ಸಂಘದ ಪ್ರಬಂಧಕ ವಿಶ್ವನಾಥ ಪೆರಿಂಜೆ, ಸಂಯೋಜಕರಾದ ರಾಮ್ ಪೆರಿಂಜೆ, ಕೋಶಾಧಿಕಾರಿ ಅಜಯ್ ಪೆರಿಂಜೆ ಇವರೊಂದಿಗೆ ಸಂಘದ ಸದಸ್ಯರು ಉಪಸ್ಥಿತರಿದ್ದರು.