ಕುಂಬಳೆ: ಮುಜುಂಗಾವು ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ, ಕಾಸರಗೋಡು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಮತ್ತು ಶ್ರೀಕೃಷ್ಣ ವಿದ್ಯಾಲಯ ಶೇಡಿಕಾವು ಕುಂಬಳೆ ಇವರ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಶಸ್ತ್ರ ಚಿಕಿತ್ಸಾ ಶಿಬಿರವು ಯಶಸ್ವಿಯಾಗಿ ಶೇಡಿಕಾವಿನಲ್ಲಿ ಇತ್ತೀಚೆಗೆ ಜರಗಿತು.
ಸಂಪನ್ಮೂಲ ವ್ಯಕ್ತಿಗಳಾದ ಡಾ.ಆನಂದ ಹಂದೆ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಗುರುವಂದನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವಿದ್ಯಾಲಯ ವ್ಯವಸ್ಥಾಪಕ ಶೇಂತಾರು ನಾರಾಯಣ ಭಟ್ ಶುಭ ಹಾರೈಸಿದರು. ಅರ್ಜುನಗುಳಿ ಯಸ್.ಯನ್. ಭಟ್ ಸ್ವಾಗತಿಸಿ, ಯಸ್ ಯನ್ ಶರ್ಮ ಸೇಡಿಗುಮ್ಮೆ ವಂದಿಸಿದರು.