HEALTH TIPS

ಚಿಕಿತ್ಸಾ ಕ್ರಮಗಳಲ್ಲಿ ದಾಖಲೀಕರಣವೂ ಮಹತ್ವದ್ದು-ವಿಜ್ಞಾನಿ ಅಶೋಕ್ ರಾಮನ್


               ಕಾಸರಗೋಡು: ರೋಗ ನಿರ್ಣಯ ಮತ್ತು ನಿವಾರಣೆಯಲ್ಲಿ ದಾಖಲೀಕರಣ ಮಹತ್ವದ್ದಾಗಿದ್ದು, ಈ ನಿಟ್ಟಿನಲ್ಲಿ ಗಂಭೀರ ಚಿಂತನೆಗಳ ಅಗತ್ಯವಿದೆ ಎಂದು ಬೆಂಗಳೂರಿನ ಕಂಪ್ಯೂಟರ್ ತಂತ್ರಜ್ಞಾನ ಕ್ಷೇತ್ರದ ಹಿರಿಯ ವಿಜ್ಞಾನಿ ಅಶೋಕ್ ರಾಮನ್ ತಿಳಿಸಿದರು.
           ಉಳಿಯತ್ತಡ್ಕದ ಇನ್ಸ್‍ಟಿಟ್ಯೂಟ್ ಆಫ್ ಎಪ್ಲೈಡ್ ಡರ್ಮಟೋಲಜಿ(ಐಎಡಿ)ಯಲ್ಲಿ ನಡೆಯುತ್ತಿರುವ ಆನೆಕಾಲು ಮತ್ತು ನಲಿಂಪೋಡೆಮಾ ರೋಗಗಳ ರಾಷ್ಟ್ರೀಯ ವಿಚಾರ ಸಂಕಿರಣದ ಕೊನೆಯ ದಿನವಾದ ಗುರುವಾರ ನಡೆದ "ಲಿಂಪೋಡೆಮಾ ಡಾಟಾಬೇಸ್ ಆಂಡ್ ಎನಾಲಿಸ್ಟಿಕ್ಸ್" ವಿಷಯದ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
        ಚಿಕಿತ್ಸಾ ವಿಧಾನಗಳು ಕ್ಲಿಷ್ಟವಾಗಿರುವ ಇಂದಿನ ಸಂದರ್ಭದಲ್ಲಿ ಕಾಲಮಾನಕ್ಕೆ ಅನುಗುಣವಾಗಿ ಆಧುನಿಕ ತಂತ್ರಜ್ಞಾನಗಳ ಮೂಲಕ ಆರೋಗ್ಯ ಚಿಕಿತ್ಸೆಗಳನ್ನು ಮುನ್ನಡೆಸಬೇಕು. ಭೌಗೋಳಿಕ ವಿಭಿನ್ನತೆ, ಹವಾಮಾನ, ಆಹಾರ-ವಿಹಾರಗಳ ವೈವಿಧ್ಯತೆಗಳ ನಮ್ಮ ರಾಷ್ಟ್ರದಲ್ಲಿ ಒಂದೇ ರೋಗಗಳಿಗೆ ಎಲ್ಲೆಡೆ ಸಮಾನ ರೀತಿಯ ಚಿಕಿತ್ಸಾ ವಿಧಾನ ಸಮರ್ಪಕವಾಗಬೇಕೆಂದಿಲ್ಲ. ಈ ಹಿನ್ನೆಲೆಯಲ್ಲಿ ಚಿಕಿತ್ಸೆಗಳಿಗೆ ಆಗಮಿಸುವವರ ಸಮಗ್ರ ವಿವರಗಳನ್ನು ಪ್ರತ್ಯೇಕವಾಗಿ ರೂಪಿಸಿರುವ ತಂತ್ರಜ್ಞಾನದಡಿಯಲ್ಲಿ ಏಕೀಕರಿಸುವ ಮಹತ್ವದ ಬಗ್ಗೆ ಜಾಗೃತಿಯ ಅಗತ್ಯ ಇದೆ ಎಂದು ಅವರು ತಿಳಿಸಿದರು.
         ಕಾಸರಗೋಡು ಸಿಪಿಸಿಆರ್‍ಐ ಯ ಡಾ.ಮುರಳೀಧರನ್ ಕೆ ಹಾಗೂ ಐಎಡಿಯ ಆಯುರ್ವೇದ ವಿಭಾಗ ಮುಖ್ಯಸ್ಥ ಡಾ.ಎಂ.ಜಿ.ಅಗ್ಗಿತ್ತಾಯ ಸಮನ್ವಯಕಾರರಾಗಿ ಸಹಕರಿಸಿದರು.
        ಬಳಿಕ ಅಂತರಾಷ್ಟ್ರೀಯ ವೈದ್ಯ ತಂತ್ರಜ್ಞರ ತಂಡದವರಿಂದ ವೈದ್ಯಕೀಯ ಶಿಬಿರ, ಚರ್ಚೆ ಮತ್ತು ಸಮಾಲೋಚನೆಗಳು ನಡೆದವು.ಇದೇ ಸಂದರ್ಭ ಲಿಂಪೋಡೆಮಾ ಆರೋಗ್ಯ ಅರಿವು ಯೋಜನೆಯಡಿ ನಡೆದ ಉಪನ್ಯಾಸದಲ್ಲಿ ಇಗ್ಲೆಂಡ್‍ನ ರೋಯಲ್ ಡೆರ್ಬೇ ವೈದ್ಯಕೀಯ ವಿದ್ಯಾಲಯದ ಕಟೇ ರಿಚಸ್ಸ್, ಕೊಲ್ಲಂ ಅಮೃತಾ ಆಸ್ಪತ್ರೆಯ ಪಂಚಕರ್ಮ ವಿಭಾಗದ ಮುಖ್ಯಸ್ಥ ಡಾ. ಅನಂತರಾಮ ಶರ್ಮಾ ಮಾತನಾಡಿದರು. ಐಎಡಿಯ ಹೋಮಿಯೋಪತಿ ವಿಭಾಗದ ಡಾ.ಖೈರುಲ್ ಖುರ್ಷಿದ್ ಜಿ ಸಮನ್ವಯಕಾರರಾಗಿ ಸಹಕರಿಸಿದರು. ಬಳಿಕ ಉತ್ತರಖಂಡ ಹರಿದ್ವಾರದ ಪತಂಜಲಿ ಯೋಗಪೀಠದ ಡಾ.ಸಚಿನ್ ಕುಮಾರ್ ಶರ್ಮಾ, ಜೆಎಸ್‍ಎಸ್ ವೈದ್ಯಕೀಯ ಸಂಶೋದನಾ ಕೇಂದ್ರದ ಪ್ರೊ.ಮೃತ್ಯುಂಜಯ, ಐಎಡಿಯ ಆಯುರ್ವೇದ ವಿಭಾಗದ ಡಾ.ಎಂ.ಜಿ.ಅಗ್ಗಿತ್ತಾಯ ಅವರಿಂದ ಲಿಂಪೋಡೆಮಾ ರೋಗ ನಿವಾರಣೆಯಲ್ಲಿ ಯೋಗದ ಮಹತ್ವದ ಬಗ್ಗೆ ಉಪನ್ಯಾಸ, ಪ್ರಾತ್ಯಕ್ಷಿಕೆಗಳು ರೋಗಿಗಳೊಂದಿಗೆ ನಡೆಯಿತು.
      ಅಪರಾಹ್ನದ ಬಳಿಕ ಸಂಯೋಜಿತ ಚಿಕಿತ್ಸಾ ವಿಧಾನದ ಪೂರಕ ಬೆಳವಣಿಗೆ-ಸಂಶೋಧನೆಯಲ್ಲಿ ಅಂತರಾಷ್ಟ್ರೀಯ ಸಹಭಾಗಿತ್ವ ಸಹಕಾರದ ಬಗ್ಗೆ ವಿಸ್ಕøತ ಚರ್ಚೆ ನಡೆಯಿತು. ಪ್ರೊ.ಟೆರೆನ್ಸ್ ರೆಯಾನ್, ಡಾ. ರಿ ರೆಸೋಲ್ಲಿನ್ ಯೋಟ್ಸು, ಡಾ.ಮೊಲವ್ ವನ್ ಝೇಂಟನ್, ಅಶೋಕ್ ರಾಮನ್, ಡಾ.ರಾಜೇಂದ್ರ ಪಿಲಾಂಕಟ್ಟೆ, ಡಾ.ವಿಜಯ್ ಬಸವರಾಜ್, ಡಾ.ಎಂ.ಜಿ.ಅಗ್ಗಿತ್ತಾಯ ಹಾಗೂ ಬೆಂಗಳೂರಿನ ಹ್ಯೂಮನ್ ಜೆನೆಟಿಕ್ ಸೆಂಟರ್ ಮತ್ತು ತಿರುವನಂತಪುರದ ಮೋಲಿಕ್ಯುಲರ್ ಬಯೋಲಜಿ ಮತ್ತು ಅಪ್ಲೈಡ್ ಸೈನ್ಸ್‍ನ ವಿಜ್ಞಾನಿಗಳು ಭಾಗವಹಿಸಿದರು. ಪ್ರೊ.ಪೀಟರ್ ಮೋರ್ಟಿಮರ್ ಹಾಗೂ ಐಎಡಿ ನಿರ್ದೇಶಕ ಡಾ.ಎಸ್.ಆರ್.ನರಹರಿ ಸಮನ್ವಯಕಾರರಾಗಿ ಭಾಗವಹಿಸಿದರು.
         Àಮಾರೋಪ ಸಮಾರಂಭ ನಡೆಯಿತು. ಪ್ರೊ.ಟೆರೆನ್ಸ್ ಜೆ. ರಿಯಾನ್, ಪ್ರೊ.ಪೀಟರ್ ಮೋರ್ಟಿಮರ್, ಪ್ರೊ.ಮೃತ್ಯುಂಜಯ, ಡಾ. ರೀ ರೊಸೆಲ್ಲಿನ್ ಯೋಟ್ಸು ಮಾತನಾಡಿದರು. ಜಿಲ್ಲಾಧಿಕಾರಿ ಡಾ. ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries