HEALTH TIPS

ಶಿವಾಂಜಲಿ ನೃತ್ಯ ಕಲಾ ಕೇಂದ್ರದ ವಾರ್ಷಿಕೋತ್ಸವ


      ಪೆರ್ಲ: ರಾಷ್ಟ್ರದ ಶ್ರೀಮಂತಿಕೆಯಾದ ಕಲಾ ಪರಂಪರೆ ಇಂದಿಗೂ ಗುರುಮುಖೇನವಾಗಿ ನಡೆದುಬಂದಿರುವುದು ಅದರ ಮಹತ್ವ, ಪಾವಿತ್ರ್ಯದ ಸಂಕೇತವಾಗಿದೆ. ಶ್ರದೆ, ಭಕ್ತಿ, ಪ್ರೀತಿಯಿಂದ ನೃತ್ಯ ಕಲೆಗಳನ್ನು ಅಭ್ಯಸಿಸಿದಲ್ಲಿ ಮಾತ್ರ ಕರಗತವಾಗಬಲ್ಲದು. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶವಾದ ಪೆರ್ಲದಲ್ಲಿ ಶಾಸ್ತ್ರೀಯ ನೃತ್ಯ ಕಲಿಕೆಗೆ ಅವಕಾಶ ಕಲ್ಪಿಸಿ ಜನಸಾಮಾನ್ಯರಿಗೂ ಕಲಿಕಾವಕಾಶ ಒದಗಿಸುತ್ತಿರುವ ಶಿವಾಂಜಲಿ ನøತ್ಯ ಕಲಾಕೇಂದ್ರದ ಅಹರ್ನಿಶಿ ಪ್ರಯತ್ನಗಳು ಸ್ತುತ್ಯರ್ಹ ಎಂದು  ಹಿರಿಯ ರಂಗ ನಿರ್ದೇಶಕ, ಚಲನಚಿತ್ರ ನಟ ಕಾಸರಗೋಡು ಚಿನ್ನಾ ಅಭಿಪ್ರಾಯ ವ್ಯಕ್ತಪಡಿಸಿದರು.
    ಪೆರ್ಲದ ಶಿವಾಂಜಲಿ ನೃತ್ಯ ಕಲಾ ಕೇಂದ್ರದ ನೇತೃತ್ವದಲ್ಲಿ ಶನಿವಾರ ಪೆರ್ಲದ ಶ್ರೀಸತ್ಯನಾರಾಯಣ ಹೈಸ್ಕೂಲು ಆವರಣದಲ್ಲಿ ನಡೆದ ಸಂಸ್ಥೆಯ ಏಳನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
     ಶಾಸ್ತ್ರೀಯ ನೃತ್ಯ ಪ್ರಕಾರಗಳಿಗೆ ಆಧುನಿಕ ಸಾಮಾಜಿಕ ವ್ಯವಸ್ಥೆ ತೆರೆದ ಹೃದಯದಿಂದ ಅಂತಃಕರಣ ಪೂರ್ವಕ ಒಲವು ನೀಡಲೇಬೇಕು. ಶಾಸ್ತ್ರೀಯ ಸಿದ್ದಾಂತಗಳ ಹಿಂದೆ ಜನಜೀವನದ ಉತ್ಕರ್ಷೆಯ, ಸರ್ವರ ಒಳಿತಿನ ಒಳನೋಟಗಳಿದ್ದು, ಪ್ರಯತ್ನಗಳು ಸಾಗಬೇಕು ಎಂದು ಅವರು ಹಾರೈಸಿದರು.
   ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೆ. ಕೈಲಾಸಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಸತ್ಯನಾರಾಯಣ ಶಾಲಾ ಪ್ರಬಂಧಕ ಶ್ರೀಕೃಷ್ಣ ವಿಶ್ವಾಮಿತ್ರ ಹಾಗೂ ಶಾಲಾ ಮುಖ್ಯೋಪಾಧ್ಯಾಯ ರಾಜೇಂದ್ರ ಬಿ. ಉಪಸ್ಥಿತರಿದ್ದು ಶುಭಾಶಂಸನೆಗೈದರು. ಕಾರ್ಯಕ್ರಮದಲ್ಲಿ ಹಿರಿಯ ನೃತ್ಯ ಗುರುಗಳಾದ ವಿದುಷಿ ಶಶಿಕಲಾ ಟೀಚರ್ ಇವರನ್ನು ಫಲ ಪುಷ್ಪ ನೀಡಿ ಗೌರವಿಸಲಾಯಿತು.
   ಸಭಾ ಕಾರ್ಯಕ್ರಮದ ಬಳಿಕ ಭರತನಾಟ್ಯ, ಜಾನಪದ ಹಾಗೂ ನೃತ್ಯ ರೂಪಕ ಶ್ರೀಕೃಷ್ಣ ಪಾರಿಜಾತ ಪ್ರದರ್ಶನಗೊಂಡಿತು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries