ಉಪ್ಪಳ : ಲೋಕಕಲ್ಯಾಣಕ್ಕಾಗಿ ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಫೆ.18 ರಿಂದ 24ರ ವರೆಗೆ ನಡೆಯಲಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗದ ಪೂರ್ವಸಿದ್ಧತೆ ಭರದಿಂದ ಸಾಗುತ್ತಿದೆ. ಅತ್ಯಪೂರ್ವವಾಗಿ ನಡೆಯಲಿರುವ ಈ ಯಾಗವು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಮತ್ತು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿಗಳ ನಿರ್ದೇಶನದಲ್ಲಿ ಉಡುಪಿ ಗುಂಡಿಬೈಲು ಶ್ರೀಸುಬ್ರಹ್ಮಣ್ಯ ಅವಧಾನಿಗಳ ಸಹಕಾರದೊಂದಿಗೆ ಕಟೀಲು ಶ್ರೀಕ್ಷೇತ್ರದ ಅನುವಂಶಿಕ ಪ್ರಧಾನ ಅರ್ಚಕ ಬ್ರಹ್ಮಶ್ರೀ ಕಮಲಾದೇವಿ ಪ್ರಸಾದ ಅಸ್ರಣ್ಣರವರ ಪ್ರಧಾನ ಪ್ರಧಾನ ಆಚಾರ್ಯತ್ವದಲ್ಲಿ ವೇದಮಾತೆ ಶ್ರೀ ಗಾಯತ್ರೀ ದೇವಿಯ,ಸದ್ಗುರು ಶ್ರೀ ನಿತ್ಯಾನಂದ ಗುರುಗಳ ಪುನ:ಪ್ರತಿಷ್ಠಾ ಅಷ್ಟಬಂಧ,ಸಾಂನಿಧ್ಯ,ಕಲಶಾಭಿµಕ ಮತ್ತು ಖ್ಯಾತ ಶ್ರೌತ ವಿದ್ವಾಂಸರಾದ ಗೋಕರ್ಣದ ವಿದ್ವಾನ್ ಗಣೇಶ ವಾಸುದೇವ ಜೋಗಳೇಕರ್ ಅವರ ಅಧ್ವರ್ಯವದಲ್ಲಿ ಬ್ರಹ್ಮಶ್ರೀ ಅನಿರುದ್ಧ ವಾಜಪೇಯಿ ಅವರ ಯಜಮಾನತ್ವದಲ್ಲಿ ವಿಶ್ವಜಿತ್ ಅತಿರಾತ್ರ ಸೋಮಯಾಗವು ಅರುಣ ಕೇತುಕ ಚಯನದೊಂದಿಗೆ ಜರಗಲಿರುವುದು.
ಕಾರ್ಯಕ್ರಮದ ಯಶಸ್ಸಿಗಾಗಿ ಯಾಗ ಸಮಿತಿಯ ಪದಾಧಿಕಾರಿಗಳು ಮತ್ತು ನೂರಾರು ಭಕ್ತ ಸ್ವಯಂಸೇವಕರು ರಾತ್ರಿ ಹಗಲೆನ್ನದೆ ದುಡಿಯುತ್ತಿರುವುದಾಗಿ ಆಶ್ರಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ನುಡಿದರು.ಸುದ್ದಿಗೋಷ್ಠಿಯಲ್ಲಿ ಯಾಗ ಸಮಿತಿಯ ಕಾರ್ಯಾಧ್ಯಕ್ಷರಾದ ನ್ಯಾಯವಾದಿ ಮೋನಪ್ಪ ಭಂಡಾರಿ,ಡಾ.ಎಂ.ಶ್ರೀಧರ ಭಟ್,ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ನಾವರ,ಪುರುಶೋತ್ತಮ ಭಂಡಾರಿ,ರಾಮಚಂದ್ರ ಚೆರುಗೋಳಿ,ಪ್ರಚಾರ ಸಮಿತಿ ಸಂಚಾಲಕ ರವೀಂದ್ರ ಶೆಟ್ಟಿ ಉಳಿದೊಟ್ಟು ಮತ್ತು ಆರ್ಥಿಕ ಸಮಿತಿ ಸಂಚಾಲಕ ರವಿರಾಜ ಶೆಟ್ಟಿ ನಿಟ್ಟೆಗುತ್ತು ಉಪಸ್ಥಿತರಿದ್ದರು. ಜ.17 ರಂದು ಸಂಜೆ 3.30ಕ್ಕೆ ಐಲಶ್ರೀದುರ್ಗಾ ಪರಮೇಶ್ವರಿ ಕ್ಷೇತ್ರ ಮತ್ತು ಮಂಗಳೂರು ಕದ್ರಿ ಶ್ರೀಮಂಜುನಾಥ ಕ್ಷೇತ್ರದಿಂದ ಹೊರೆಕಾಣಿಕೆ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿರುವುದು.