ಮಂಜೇಶ್ವರ: ಕುಂಬಳೆ ಹಾಗೂ ಮಂಜೇಶ್ವರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ,ಕುಂಜತೂರು, ತುಮಿನಾಡ್, ಮಂಜೇಶ್ವರ, ಮೋರತ್ತನೆ, ವರ್ಕಾಡಿ, ಬಂದಿಯೊಡ್,ಅಡ್ಕ, ಕಡಂಬರ್, ಬಾಯರ್ ಪದವು, ನಾಯ್ಕಪು, ಪೆರ್ಮುದೆ, ಪ್ರದೇಶಗಳಲ್ಲಿ ಆಯ್ಯಪ್ಪ ಭಕ್ತರ ಮೇಲೆ, ಹಿಂದೂ ಮುಖಂಡರ ಮೇಲೆ ,ಮಾರಣಾಂತಿಕ ಹಲ್ಲೆ ,ಕಡಂಬಾರು ವಿಷ್ಣುಮೂರ್ತೀ ದೇವಾಲಯಕ್ಕೆ ನುಗ್ಗಿ ತಲವಾರು ದಾಳಿ ನಡೆಸಿ ಹಿಂದೂ ಕಾರ್ಯಕರ್ತರನ್ನು ಕೊಲೆಯತ್ನ ನಡೆಸಿದ ಮುಸ್ಲೀಂ ಮೂಲಭೂತವಾದಿ ಗಳನ್ನು ಬಂದಿಸದ ಪೊಲೀಸ್ ಇಲಾಖೆಯ ಕ್ರಮ ಖಂಡನೀಯ ಮತ್ತು ಓಲೈಕೆಯ ಪರಮಾವಧಿ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಅರೋಪಿಸಿದೆ.
ಹರತಳ ನೆಪದಲ್ಲಿ ಬಿಜೆಪಿ ಕಾರ್ಯಕರ್ತರು ಗಳನ್ನು, ಹಿಂದೂಗಳನ್ನು ಜಾಮೀನು ರಹಿತ ಕೇಸ್ ದಾಖಲಿಸಿ ಜೈಲಿಗಟುವವ ಪೊಲೀಸ್, ಆಯ್ಯಪ್ಪ ಭಕ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದವರನ್ನು, ಹಿಂದುಗಳ ಮನೆ ಗಳನ್ನು ಅಕ್ರಮಿಸಿದವರನ್ನು, ದೇವಾಲಯಕ್ಕೆ ನುಗ್ಗಿ ,ಎಸ್ಸಿ ಕಾಲನಿ ಗಳಿಗೆ ನುಗ್ಗಿ ಅಕ್ರಮಿಸಿದ ಒಬ್ಬನೇ ಒಬ್ಬ ಮೂಲಭೂತವಾದಿ ಆರೋಪಿಗಳನ್ನು ಬಂದಿಸಿಲ್ಲ ಮಾತ್ರವಲ್ಲ ,ಆರೋಪಿಗಳ ಮೇಲೆ ಕನಿಷ್ಠ ಪ್ರಾಥಮಿಕ ಮೊಕ್ಕದಮೇಯನ್ನೇ ದಾಖಲಿಸದೆ ಇರುವುದು ಪಿನರಾಯಿ ಸರಕಾರದ ಆದೇಶದಂತೆ. ಇಲ್ಲಿನ ಸ್ಥಳೀಯ ಎಡರಂಗದ ನೇತಾರರು ಕೊಟ್ಟ ಲಿಸ್ಟ್ ನಂತೆ ಹಿಂದುಗಳ ಮೇಲೆ -ಬಿಜೆಪಿ ನಾಯಕರುಗಳ ಮೇಲೆ ಕೇಸ್ ದಾಖಲಿಸಿ ಸುವ ಕ್ರಮ ಖಂಡಿಸಿ ಬಿಜೆಪಿ, ಕಪಟ ಶಾಂತಿ ಸಭೆಯನ್ನು ಬಹಿಷ್ಕಾರ ಮಾಡಿದೆ ಎಂದು ಬಿಜೆಪಿ ತಿಳಿಸಿದೆ.
ಮೋರತ್ತನೆ ಯಲ್ಲಿ ಮುಸ್ಲಿಂರಿಂದ ಆಕ್ರಮಣಗೊಂದು ಬೆಳಿಗ್ಗೆ 6 ಗಂಟೆಗೆ ಆಸ್ಪತ್ರೆಯಲ್ಲಿ ದಾಖಲಾದ ವ್ಯಕ್ತಿಯ ಮೇಲೆ ಪೊಲೀಸ್ ನಕಲಿ ಕೇಸ್ ದಾಖಲಿಸಲು ಮುಂದಾಗಿ ಮುಖಬಂಗ ಗೊಂಡು ಮುಖ ರಕ್ಷಿಸಿ ಕೊಳ್ಳಲೂ ಈಗ ವರ್ಕಾಡಿ ಯ ಬಿಜೆಪಿ ನಾಯಕರ ,ಜನಪ್ರತಿನಿಧಿಗಳ ಮನೆಗಳಿಗೆ ರಾತ್ರಿ ಧಾಳಿ ನಡೆಸುತ್ತಿರುವುದು ಯಾರ ಅಜ್ಞೆ ಯಂತೆ ಎಂದು ಬಿಜೆಪಿ ಪೊಲೀಸ್ ಇಲಾಖೆಯನ್ನು ಪ್ರಶ್ನಿಸಿದೆ.
ಕಡಂಬರ್ ದೇವಾಲಯದ ಒಳಗೆ ತಲವಾರು ದಾಳಿ ನಡೆಸಿದವರನ್ನು ಪೊಲೀಸ್ ಬಂದಿಸಿಲ್ಲ, ಕುಂಜತೂರಲ್ಲಿ ಅಯ್ಯಪ್ಪ ಭಕ್ತರ ಮೇಲೆ ಆಕ್ರಮಣ ನಡೆಸಿದ, ಹಾಗೂ ಉಪ್ಪಳ ಕೇಂದ್ರೀಕರಿಸಿ ಆಯ್ಯಪ್ಪ ಮಾಲಾಧಾರಿಗಳು ವಾಹನಗಳಿಗೆ ಕಲ್ಲು ತೋರಟ ನಡೆಸುವ ಅಕ್ರಮಿಗಳ ಬಂಧನದ ಬಳಿಕವೇ ಬಿಜೆಪಿ ಶಾಂತಿ ಸಭೆಗೆ ಸಹಕರಿಸಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಅಡ್ಕದಲ್ಲಿ ಮನೆಗಳಗೆ ,ವಾಹನ ಗಳಗೆ ಹಾನಿ ಯಾದ ಬಗ್ಗೆ ಪೊಲೀಸ್ ಇಲಾಖೆ ಪ್ರಾಥಮಿಕ ತನಿಖೆಯನ್ನು ನಡೆಸದೆ ಮನೆಯವರನ್ನೇ ಬೆದರಿಸುತ್ತಿದೆ ಎಂದು ಬಿಜೆಪಿ ದೂರಿದೆ,.
ಸಿಪಿಎಮ್ ಮಂಡಲ ಕಾರ್ಯದರ್ಶಿ ಯವರ ಹೇಳಿಕೆ ಎಡರಂಗದ ರಾಜಕೀಯ ದಿವಳಿತನವನ್ನು ತೋರಿಸುತದೆ. ಕುಂಜತೂರು, ಮಂಜೇಶ್ವರ ಗಳಲ್ಲಿ ಸಿಪಿಎಂ ಪಕ್ಷಕ್ಕೆ ಕಾರ್ಯಕರ್ತರಿಲ್ಲ ಅದರಿಂದ ಆಯ್ಯಪ್ಪ ಭಕ್ತರನ್ನು ಅಕ್ರಮಿಸಿಲ್ಲ ಎಂದಿರುವುದು ಹಾಗಾದರೆ ಸಿಪಿಎಮ್ ಶಕ್ತಿ ಇದ್ದಲ್ಲಿ ಆಯ್ಯಪ್ಪ ಭಕ್ತರನ್ನು ಅಕ್ರಮಿಸಿರುದನ್ನು ಪರೋಕ್ಷವಾಗಿ ಒಪ್ಪಿಕೊಂಡತೆ.
ಶಕ್ತಿ ಇಲ್ಲದ್ದ ಪ್ರದೇಶದಲ್ಲಿ ಪ್ರದೇಶಗಳಲ್ಲಿ ಮುಸ್ಲಿಂ ಮೂಲಭೂತ ವಾದಿಗಳೊಂದಿಗೆ ಸೇರಿ ಕೋಮುಗಲಭೆಗೆ ಎಡರಂಗ ಪ್ರಯತ್ನಿಸಿದೆ ಎಂಬುದೂ ಮಂಜೇಶ್ವರ ಮಂಡಲ ವ್ಯಾಪ್ತಿಯಲ್ಲಿ ಹಿಂದುಗಳ ಮೇಲಿನ ಅಕ್ರಮನದಿಂದ ಸ್ಪಷ್ಟವಾಗಿದೆ ಎಂದು ಬಿಜೆಪಿ ಆರೋಪಿಸಿದೆ.