ಮಧೂರು: ಮಧೂರು ಸಮೀಪದ ಪಟ್ಲ ಶ್ರೀ ಭಗವತೀ ಕ್ಷೇತ್ರದಲ್ಲಿ ಜ.14ರಿಂದ 18ರ ತನಕ ಕಳಿಯಾಟ ಮಹೋತ್ಸವವು ಜರಗಲಿದೆ. ಆ ಪ್ರಯುಕ್ತ ಜ.14ರಂದು ಸಂಜೆ 6 ಗಂಟೆಗೆ ಕ್ಷೇತ್ರದಿಂದ ಶ್ರೀ ದೈವಗಳ ಭಂಡಾರ ಹೊರಡುವುದು. ರಾತ್ರಿ 11ಕ್ಕೆ ನಡಾವಳಿ ಉತ್ಸವ ಬಲಿ ನಡೆಯಲಿದೆ.
ಜ.15ರಂದು ಸಂಜೆ 6.30ಕ್ಕೆ ಪುಲ್ಲೂರ್ಣನ್ ದೈವದ ವೆಳ್ಳಾಟ, ರಾತ್ರಿ 7.30ಕ್ಕೆ ಪಟ್ಲ ಶ್ರೀ ಭಗವತೀ ಮಹಿಳಾ ಸಂಘದ ವತಿಯಿಂದ ಹೊರೆಕಾಣಿಕೆ ಸಮರ್ಪಣೆ, 9ಕ್ಕೆ ಅನ್ನದಾನ ನೆರವೇರಲಿದೆ. ಜ.16ರಂದು ಮುಂಜಾನೆ 2.30ಕ್ಕೆ ಪುಲಿಚ್ಚಾನ್ ದೈವ, 5ಕ್ಕೆ ಕರೀಂದ್ರನ್ ದೈವ, ಬೆಳಿಗ್ಗೆ 6 ಗಂಟೆಗೆ ಪುಲಿಕಂಡನ್ ದೈವಾರಾಧನೆ, ಮಧ್ಯಾಹ್ನ 1ರಿಂದ ಅನ್ನದಾನ, ರಾತ್ರಿ 8ಕ್ಕೆ ಏಣಿಯರ್ಪು ಪ್ರಾದೇಶಿಕ ಸಮಿತಿ ವತಿಯಿಂದ ಹೊರಕಾಣಿಕೆ ಸಮರ್ಪಣೆ, 8.30ರಿಂದ ಅನ್ನದಾನ, 11.30ಕ್ಕೆ ಪುಲಿಕಂಡನ್ ದೈವದ ವೆಳ್ಳಾಟ, ಪ್ರಧಾನ ಉತ್ಸವ ಬಲಿ, ಬಿಂಬ ಪ್ರದರ್ಶನ ನೆರವೇರಲಿದೆ.
ಜ.17ರಂದು ಬೆಳಿಗ್ಗೆ 10ಕ್ಕೆ ಕಾಳಪುಲಿಯನ್ ದೈವದ ವೆಳ್ಳಾಟ, ಪ್ರಸಾದ ವಿತರಣೆ, ಮಧ್ಯಾಹ್ನ 1ಕ್ಕೆ ಅನ್ನದಾನ, ಸಂಜೆ 6.30ಕ್ಕೆ ಪುಲ್ಲೂರ್ಣನ್ ದೈವದ ವೆಳ್ಳಾಟ, ರಾತ್ರಿ 12ಕ್ಕೆ ಪುಲಿಕಂಡನ್ ದೈವದ ವೆಳ್ಳಾಟ ಜರಗಲಿದೆ. ಜ.18ರಂದು ಮುಂಜಾನೆ 2.30ಕ್ಕೆ ಪುಲ್ಲೂರ್ಣನ್ ದೈವದ ವೆಳ್ಳಾಟ, ಉತ್ಸವ ಬಲಿ, ಬಿಂಬ ಪ್ರದರ್ಶನ, ಬೆಳಿಗ್ಗೆ 9ಕ್ಕೆ ಕಾಳಪುಲಿಯನ್ ದೈವಾರಾಧನೆ, ರಾತ್ರಿ 7.30ಕ್ಕೆ ಪುಲ್ಲೂರ್ಣನ್ ದೈವ ಮತ್ತು ವಿಷ್ಣುಮೂರ್ತಿ ದೈವವು ಮಧೂರು ಶ್ರೀ ಮದನಂತೇಶ್ವರ ಕ್ಷೇತ್ರಕ್ಕೆ ಹಾಗೂ ಉಳಿಯ ಶ್ರೀ ಧನ್ವಂತರಿ ಸನ್ನಿಧಿಗೆ ಹೊರಡುವುದು. ಜ.19ರಂದು ಮುಂಜಾನೆ 2 ಗಂಟೆಗೆ ಭಂಡಾರ ಕ್ಷೇತ್ರಕ್ಕೆ ಶ್ರೀ ದೈವಗಳ ಭಂಡಾರವು ಹಿಂತಿರುಗುವುದರೊಂದಿಗೆ ಕಳಿಯಾಟ ಸಂಪನ್ನಗೊಳ್ಳಲಿದೆ.