ಮಂಜೇಶ್ವರ: ವರ್ಕಾಡಿಯ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ವಸಂತ ರಾಜ್ ಶೆಟ್ಟಿ ಅವರಿಗೆ ಕೇರಳ ಪ್ರದೇಶ್ ಕಾಂಗ್ರೆಸ್ಸ್ ಸದಸ್ಯರಾದ ನ್ಯಾಯವಾದಿ.ಸುಬ್ಬಯ್ಯ ರೈ ಅವರ ನೇತೃತ್ವದಲ್ಲಿ ನಿರ್ಗಮಿತ ಅಧ್ಯಕ್ಷ ಮಜಾಲ್ ಮಹ್ಮದ್ ಅವರು ಅಧಿಕಾರ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಅಧ್ಯಕ್ಷ ಮಹ್ಮದ್ ಡಿ.ಎಂ.ಕೆ., ಅಧ್ಯಕ್ಷ ಉಮ್ಮರ್ ಬೋರ್ಕಳ, ಉಪಾಧ್ಯಕ್ಷರಾದ ಐಆರ್‍ಡಿಪಿ ಇಬ್ರಾಹಿಂ, ಹಿರಿಯ ನೇತಾರರಾದ ಬಾರಿಕೆ ರಾಮಯ್ಯ ನಾಯಕ್, ಶಾಂತಾ ಆರ್.ನಾಯಕ್, ಹಾಜಿ ಟಿ.ಎ.ಕುಂಞÂ, ಪ್ರಭಾಕರ ನಾಯಕ್, ಹಮೀದ್ ಹೊಸಂಗಡಿ, ಮಂಜೇಶ್ವರ ಮಂಡಲ ಕಾಂಗ್ರೆಸ್ ಅಧ್ಯಕ್ಷ ಉಮ್ಮರ್ ಶಾಫಿ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಹ್ಮದ್ ಮಜಾಲ್ ಅಧ್ಯಕ್ಷತೆ ವಹಿಸಿದರು. ಬ್ಲಾಕ್ ಪ್ರಧಾನ ಕಾರ್ಯದರ್ಶಿ ಗಣೇಶ್ ಪಾವೂರು ಸ್ವಾಗತಿಸಿ, ಹನಿಫ ಪಿ.ಕೆ. ವಂದಿಸಿದರು.