ಮುಳ್ಳೇರಿಯ: ಆರ್ಯ ಮರಾಠ ಸಮಾಜ ಸಂಘ ಮಂಗಳೂರು-ಕಾಸರಗೋಡು ಆಶ್ರಯದಲ್ಲಿ ಯುವ ಮರಾಠ ಸಮಿತಿ ಇದರ ನೇತೃತ್ವದಲ್ಲಿ ಕುಂಟಾರು, ಅಡೂರು ಮತ್ತು ಆದೂರು ವಲಯಗಳ ವಲಯ ಸಂಗಮ ಹಾಗೂ ಕ್ರೀಡಾಕೂಟ ಫೆ.2, 3 ಮತ್ತು 10 ರಂದು ಕುಂಟಾರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆಯಲಿದೆ.
ಫೆ.2 ಮತ್ತು 3ರಂದು ಪ್ರೀಮಿಯರ್ ಲೀಗ್ ಮಾದರಿಯ ಪುರುಷರ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಫೆ.10ರಂದು ಬೆಳಿಗ್ಗೆ 9ರಿಂದ ಪುರುಷ ಮತ್ತು ಮಹಿಳೆಯರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ. ಮಧ್ಯಾಹ್ನ 3ಕ್ಕೆ ವಲಯ ಸಂಗಮದ ಅಂಗವಾಗಿ ಸಭಾ ಕಾರ್ಯಕ್ರಮ ನಡೆಯಲಿದೆ. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಉದ್ಘಾಟಿಸುವರು. ಯುವ ಮರಾಠ ಸಮಿತಿ ಅಧ್ಯಕ್ಷ ಪ್ರಕಾಶ್ ಮಾಸ್ತರ್ ಅಧ್ಯಕ್ಷತೆ ವಹಿಸುವರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ , ಆರ್ಯ ಮರಾಠ ಸಂಘದ ಅಧ್ಯಕ್ಷ ಯತೀಂದ್ರ ಬಹುಮಾನ್ , ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಅಧ್ಯಕ್ಷ ಎ.ವಿ.ಸುರೇಶ್ ರಾವ್ ಕರ್ಮೋರೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಹಂಪಿ ವಿಶ್ವ ವಿದ್ಯಾಲಯದ ಪ್ರೊ.ಮೋಹನ್ ಕುಂಟಾರ್ ದಿ.ಪುರುಷೋತ್ತಮ ರಾವ್ ಮಾಟೆಡ್ಕ ಅವರ ಸಂಸ್ಮರಣೆ ಮಾಡುವರು. ಪ್ರೇಮಲತಾ ವೈ ರಾವ್, ಆದೂರು ವಲಯ ಸಂಚಾಲಕ ಜನಾರ್ದನ ರಾವ್ ಕಡೆಂಗೋಡು, ಅಡೂರು ವಲಯ ಸಂಚಾಲಕ ವಿವೇಕ್ ರಾವ್ ಚೆರ್ಲಕೈ, ಕುಂಟಾರು ವಲಯ ಸಂಚಾಲಕ ಉದಯ ರಾವ್ ಕುಂಟಾರು, ಜೀವನ್ ಮಾಟೆ, ನಯನ್ ಕುಮಾರ್ ಭಾಗವಹಿಸುವರು. ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.