ಕುಂಬಳೆ:ಪುತ್ತಿಗೆ ಬಾಡೂರು ಗ್ರಾಮದ ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಕಳೆದ ಧನುರ್ಮಾಸ 1ರಿಂದ ಆರಂಭಗೊಂಡ ಧನುಪೂಜೆ ಮಹೋತ್ಸವವು ಮಕರ ಸಂಕ್ರಮಣವಾದ ಸೋಮವಾರ ಭಕ್ತಜನ ಸಾಗರದೊಂದಿಗೆ ಸಮಾಪ್ತಿಗೊಂಡಿತ್ತು.
ಸೋಮವಾರ ಮುಂಜಾನೆ ಊರ ಹಾಗೂ ಪರವೂರ ಭಕ್ತರು ಧನುಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪ್ರೊ.ಎ. ಶ್ರೀನಾಥ್ ವಹಿಸಿದ್ದರು. ಬ್ರಹ್ಮಶ್ರೀ ಉಳಾಲು ಬೀಡು ಪ್ರಕಾಶ್ ಕಡಮಣ್ಣಾಯವರು ಆಶೀರ್ವಚನ ನೀಡಿದರು. ನಿವೃತ್ತ ಪ್ರಾಂಶುಪಾಲ ನಾರಾಯಣ ರಾವ್ ಪೆರ್ಲ, ಹಿರಿಯ ಧಾರ್ಮಿಕ ಮುಂದಾಳು ಜನಾರ್ಧನ ನಾಯಕ್ ಕುಂಡೇರಿ, ಪತ್ರಕರ್ತರಾದ ದೇವದಾಸ ಮೇನಾಲ ಕುಂಜತ್ತೂರು, ಜಯ ಮಣಿಯಂಪಾರೆ, ಶ್ರೀಕ್ಷೇತ್ರ ಸೇವಾ ಸಮಿತಿಯ ಡಿ. ದಾಮೋದರನ್, ಕ್ಷೇತ್ರ ಸೇವಾ ಸಮಿತಿಯ ಖಜಾಂಜಿ ಸುರೇಂದ್ರ ರೈ,ಪುತ್ತಿಗೆ ಗ್ರಾಮ ಪಂಚಾಯತಿ ಸದಸ್ಯ ಎಂ.ಕೆ. ಆನಂದ, ಮೊದಲಾದವರು ಉಪಸ್ಥಿತರಿದ್ದರು.
"ರಾಗ ಸುಧಾ"ಮಧೂರು ಇವರಿಂದ ಭಜನಾ ಸಂಕಿರ್ತನೆ ನಡೆಯಿತು. ಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ಶಂಕರ ರೈ ಮಾಸ್ತರ್ ಸ್ವಾಗತಿಸಿ, ಕಾರ್ಯದರ್ಶಿ ಎ. ಡಿ. ಕೊರಗಪ್ಪ ವಂದಿಸಿದರು. ಡಿ. ರಾಜೇಂದ್ರ ರೈ ಮಾಸ್ತರ್ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಧನುರ್ಮಾಸ ಸೇವಾ ಸಮದರ್ಭ ಕಾರ್ಯನಿರ್ವಹಿಸಿದ ವ್ಯದಿಕರು, ಇತರ ವಿಭಾಗದ ಸೇವಾ ಕಾರ್ಯಕರ್ತರನ್ನು ಗೌರವಿಸಲಾಯಿತು.