ಕುಂಬಳೆ: ಪೊಲೀಸ್ ಇಲಾಖೆ ಕಮ್ಯುನಿಸ್ಟ್ ಹಾಗೂ ಮುಸ್ಲಿಂಲಿಗ್ ನೇತಾರರ ಆಜ್ಞೆಯಂತೆ ಕಾರ್ಯನಿರ್ವಹಿಸುತ್ತಿದೆ. ಅಯ್ಯಪ್ಪ ಭಕ್ತರನ್ನು, ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು, ಬಿಜೆಪಿ ನೇತಾರರುಗಳನ್ನು ಪೊಲೀಸ್ ಇಲಾಖೆ ಬೇಟೆಯಾಡುತಿರುವುದು, ನಕಲಿ ಕೇಸ್ ದಾಖಲಿಸುತ್ತಿರುವುದು ಯಾರ ಓಲೈಕೆಗಾಗಿ. ಹಿಂದೂಗಳಿಗೆ ಮಾರಣಾಂತಿಕ ಹಲ್ಲೆ ನಡೆಸಿದ, ಕಡಂಬಾರಲ್ಲಿ ದೇವಾಲಯ ನುಗ್ಗಿ ತಲವಾರು ದಾಳಿ ನಡೆಸಿದ, ಆಯ್ಯಪ್ಪ ಭಕ್ತರ ವಾಹನಗಳಿಗೆ, ಬಂದ್ಯೋಡಿನಲ್ಲಿ ಮನೆಗಳಿಗೆ ಕಲ್ಲೆಸೆದ ಆರೋಪಿಗಳನ್ನು ಇದುವರೆಗೂ ಬಂಧಿಸದ ಪೊಲೀಸ್ ಎಡರಂಗದ ಆಜ್ಞೆಯಂತೆ ಹಿಂದುಗಳನ್ನು ಹಿಂಸಿಸುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ.ಕೆ. ಶ್ರೀಕಾಂತ್ ಆರೋಪಿಸಿದರು. ಕೋಮುಗಲಭೆ ಸೃಷ್ಟಿಸಲು ಮುಸ್ಲಿಂ ಮೂಲಭೂತವಾದಿಗಳಿಗೆ ಎಡರಂಗ ಬೆಂಬಲ ನೀಡುತ್ತಿದೆ ಎಂದು ಅವರು ಹೇಳಿದರು.
ಪೊಲೀಸ್ ಇಲಾಖೆಯ ಇಬ್ಬಗೆ ನೀತಿ ಖಂಡಿಸಿ ಕುಂಬಳೆಯಲ್ಲಿ ಬುಧವಾರ ನಡೆದ ಬಿಜೆಪಿ ಮಂಜೇಶ್ವರ ಮಂಡಲ ಪದಾಧಿಕಾರಿಗಳ ಹಾಗೂ ಪಂಚಾಯತಿ ಪ್ರಮುಖರ ಸಭೆ ಉದ್ಘಾಟಿಸಿ ಶ್ರೀಕಾಂತ ಮಾತನಾಡಿದರು.
ಈ ಸಂದರ್ಭ ಜನವರಿ 14 ರಂದು ಸೋಮವಾರ ಮಂಜೇಶ್ವರ ಪೊಲೀಸ್ ಠಾಣೆಗೆ ಬೃಹತ್ ಪ್ರತಿಭಟನಾ ಮಾರ್ಚ್ ನಡೆಸಲು ತೀರ್ಮಾನಿಸಲಾಯಿತು.
ಮಂಡಲಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಸುರೇಶ್ ಕುಮಾರ್ ಶೆಟ್ಟಿ, ಸತ್ಯಸಂಕರ್ ಭಟ್, ವಲ್ಸರಾಜ್, ಪದ್ಮನಾಭ ಕಡಪ್ಪರ, ಯಾದವ ಬಡಾಜೆ, ಜಗದೀಶ್ ಚೆಂಡೆಲ್, ವಸಂತ್ ವರ್ಕಾಡಿ, ಬಾಲಕೃಷ್ಣ ಅಂಬಾರ್, ಮಣಿಕಂಠ ರೈ, ಸುಬ್ರಹ್ಮಣ್ಯ ಭಟ್, ಸದಾಶಿವ ಚೇರಾಲು, ರಾಘವ ಬಂದ್ಯೋಡು ಹಾಗೂ ಪಂಚಾಯತಿ ಮುಖಂಡರು ಉಪಸ್ಥಿತರಿದ್ದರು. ಆದರ್ಶ್ ಸ್ವಾಗತಿಸಿ,ವಿನೋದನ್ ಕುಂಬಳೆ ವಂದಿಸಿದರು.
ಮಂಜೇಶ್ವರ ಪೋಲಿಸ್ ಠಾಣೆ ಮಾರ್ಚ್ ಯಶಸ್ವಿಗೊಳಿಸಲು ಎಲ್ಲರೂ ಸಹಕಾರ ನೀಡಬೇಕೆಂದು ಮಂಡಲಾಧ್ಯಕ್ಷರು ಕರೆ ನೀಡಿದರು.