ಬದಿಯಡ್ಕ: ಬೆಂಗಳೂರು ಅರಮನೆ ಮೈದಾನದಲ್ಲಿ ಡಿಸೆಂಬರ್ 28 ರಿಂದ 30ರ ವರೆಗೆ ನಡೆದ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹವ್ಯಕ ಸಾಧಕ ರತ್ನ ಪ್ರಶಸ್ತಿಗೆ ಭಾಜನರಾದ ಕಾಸರಗೋಡು ವಲಯದ ಖ್ಯಾತ ಸಂಗೀತಗಾರ ವೆಳ್ಳಿಕೋತ್ ವಿಷ್ಣು ಭಟ್ ಅವರನ್ನು ಭಾನುವಾರ ಕಾಸರಗೋಡು ವಲಯದ ಮಾಸಿಕ ಸಭೆಯಲ್ಲಿ ಸನ್ಮಾನಿಸಲಾಯಿತು. ಕಾಸರಗೋಡು ವಲಯದ ಅಧ್ಯಕ್ಷ ರಮೇಶ್ ಭಟ್, ಕಾರ್ಯದರ್ಶಿ ಉಳುವಾನ ಈಶ್ವರ ಭಟ್, ಮುಳ್ಳೇರಿಯ ಮಂಡಲ ಉಲ್ಲೇಖ ಪ್ರಧಾನ ಎಡನಾಡು ಕೃಷ್ಣಮೋಹನ ಭಟ್, ಹಿರಿಯ ಗುರಿಕಾರ ಶಂಕರನಾರಾಯಣ ಭಟ್ ತೆಕ್ಕೆಕೆರೆ ಉಪಸ್ಥಿತರಿದ್ದರು.
ವೆಳ್ಳಿಕ್ಕೋತ್ ವಿಷ್ಣು ಭಟ್ ಅವರಿಗೆ ಅಭಿನಂದನೆ
0
ಜನವರಿ 09, 2019