ಕಾಸರಗೋಡು: ಜಿಲ್ಲಾ ಪಂಚಾಯತ್‍ನ 2018-19 ವರ್ಷದ ಯೋಜನೆಯಲ್ಲಿ ಅಳವಡಿಸಿ ಪರಿಶಿಷ್ಟ ಜಾತಿಗೆ ಸೇರಿದ ಅಂಗೀಕೃತ ದೈವಕೋಲಕ್ಕೆ ಬಳಸುವ ಆಭರಣ ಖರೀದಿ ಸಂಬಂಧ ಅಂಗೀಕೃತ ಸಂಸ್ಥೆಗಳಿಂದ ಅರ್ಜಿ ಕೋರಲಾಗಿದೆ.
ಪರಿಶಿಷ್ಟ ಜಾತಿಯಲ್ಲಿ ಸೇರಿದ ನೋಂದಣಿ ನಡೆಸಿದ ದೈವಕೋಲ ಕಲಾವಿದರ ಸಂಘಟನೆಗಳು ಅರ್ಜಿ ಸಲ್ಲಿಸಬೇಕು. ದೈವಕೋಲವನ್ನೇ ಬದುಕಿಗೆ ಆಸರೆಯಾಗಿರಿಸಿಕೊಂಡವರಿಗೆ ಆದ್ಯತೆ ನೀಡಲಾಗುವುದು. ಬಿಳಿಹಾಳೆಯಲ್ಲಿ ಸಿದ್ಧಪಡಿಸಿದ ಅರ್ಜಿ ಸಹಿತ ಸಂಘಟನೆಯ ನೋಂದಣಿ ಪತ್ರದ ನಕಲು ಸಹಿತ ಸಿವಿಲ್ ಸ್ಟೇಷನ್‍ನಲ್ಲಿ ಚಟುವಟಿಕೆ ನಡೆಸುತ್ತಿರುವ ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿಯಲ್ಲಿ ಜ.10ರ ಮುಂಚಿತವಾಗಿ ಸಲ್ಲಿಸಬೇಕು. ಮಾಹಿತಿಗೆ ದೂರವಾಣಿ ಸಂಖ್ಯೆ 04994-256162 ಸಂಪರ್ಕಿಸಬಹುದು.