ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಧನು ಮಾಸದ ಧನುಪೂಜೆಯ ಅಂಗವಾಗಿ ಬೇಳ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಮಧೂರು ಶ್ರೀ ಸತ್ಯಸಾಯಿ ಸೇವಾ ಸಮಿತಿ ಇವರ ವತಿಯಿಂದ ಸಾಯಿ ಭಜನೆ ನಡೆಯಿತು. ಸಮಿತಿ ಸಂಚಾಲಕ ಮಹಾಲಿಂಗೇಶ್ವರ ಭಟ್ ಸಹಿತ ಸಾಯಿಕೃಷ್ಣ ತಬಲಾದಲ್ಲಿ ಸಹಕರಿಸಿದರು. ಪ್ರೇಮಲತಾ ಹಾಗೂ ರಾಜೇಶ ನೇತೃತ್ವ ವಹಿಸಿದ್ದರು.