ನವದೆಹಲಿ: ಖ್ಯಾತ ಮೆಸೆಜಿಂಗ್ ಜಾಲತಾಣ ವಾಟ್ಸಪ್ ಸುಳ್ಳು ಸುದ್ದಿಗಳು ಮತ್ತು ಗಾಸಿಪ್ ಗಳನ್ನು ನಿಯಂತ್ರಿಸಲು ಪ್ರಮುಖ ನಿರ್ಣಯವೊಂದನ್ನು ಕೈಗೊಂಡಿದ್ದು, ಫಾರ್ವರ್ಡ್ ಮಸೇಜ್ ಗಳ ಸಂಖ್ಯೆಯನ್ನು ಕಡಿತಗೊಳಿಸಿದೆ.
ವಾಟ್ಸಪ್ ಹೊಸ ಅಪ್ ಡೇಟ್ ನಲ್ಲಿ ಈ ಬದಲಾವಣೆ ಮಾಡಲಾಗಿದ್ದು, ಮೆಸೆಜ್ ಗಳ ಫಾರ್ವರ್ಡ್ ಗರಿಷ್ಠ ಮಿತಿಯನ್ನು ಕಡಿಮೆಗೊಳಿಸಲಾಗಿದೆ. ಈ ಹಿಂದೆ ಒಂದು ಮೆಸೇಜ್ ಅನ್ನು ಗರಿಷ್ಚ 20 ಮಂದಿಗೆ ಪಾರ್ವರ್ಡ್ ಮಾಡಬಹುದಾಗಿತ್ತು. ಇದೀಗ ಸಂಖ್ಯೆಯನ್ನು ಕೇವಲ 5 ಮಂದಿಗೆ ಇಳಿಸಲಾಗಿದೆ.
ತನ್ನ ನೂತನ ಬದಲಾವಣೆ ಕುರಿತು ವಾಟಸ್ಪ್ ಸಂಸ್ಥೆ ಗ್ರಾಹಕರಲ್ಲಿ ಜಾಹಿರಾತುಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದು, ಅಲ್ಲದೆ ಸುದ್ದಿ ಪತ್ರಿಕೆಗಳಲ್ಲಿ ಈ ಬಗ್ಗೆ ಜಾಹಿರಾತು ನೀಡಲೂ ಮುಂದಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಂಸ್ಛೆ ಕಳೆದ ಆರು ತಿಂಗಳಿನಿಂದ ನಾವು ಬಳಕೆದಾರರಿಂದ ಮತ್ತು ತ???ರಿಂದ ಈ ಬಗ್ಗೆ ಪ್ರತಿಕ್ರಿಯೆ ಪಡೆದಿದ್ದು, ಇದೀಗ ಈ ನೂತನ ಬದಲಾವಣೆಗೆ ಮುಂದಾಗಿದ್ದೇವೆ. ನೂತನ ಬದಲಾವಣೆ ಇಂದಿನಿಂದಲೇ ಜಾರಿಗೆ ಬರಲಿದೆ. ಬಳಕೆದಾರರು ವಾಟ್ಸ್‍ಪ್ ಅಪ್ ಡೇಟ್ ಮಾಡಿದ ಬಳಿಕ ಈ ನೂತನ ಬದಲಾವಣೆಯನ್ನು ಗಮನಿಸಬಹುದು ಎಂದು ಹೇಳಿದೆ.