ಪೆರ್ಲ: ಬಾಳೆಮೂಲೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪಾಠಕ್ಕೊಂದು ಆಟ ಎಂಬ ವಿನೂತನ ಕಲಿಕಾ ಪ್ರೇರಣಾ ಕಾರ್ಯಕ್ರಮ ಇತ್ತೀಚೆಗೆ ಜರಗಿತು.
ಕಾರ್ಯಕ್ರಮವನ್ನು ಶಾಲಾ ಶಿಕ್ಷಕ ಸಂಜೀವ ಸಿ.ಎಚ್ ನಡೆಸಿಕೊಟ್ಟರು. ಮಕ್ಕಳಿಗೆ ವಿವಿಧ ಆಟಗಳನ್ನು ಆಡಿಸಲಾಯಿತು. ಶಾಲಾ ಶಿಕ್ಷಕಿಯರಾದ ಸಹನಾ,ನಮಿತಾ ಮತ್ತು ಸುಹಾಸಿನಿ ಸಹಕರಿಸಿದರು. ಮುಖ್ಯೋಪಾಧ್ಯಾಯ ಜನಾರ್ದನ ನಾಯ್ಕ್ ಮತ್ತು ಹಿರಿಯ ಶಿಕ್ಷಕ ಮಹಾಲಿಂಗ ನಾಯ್ಕ್ ಉಪಸ್ಥಿತರಿದ್ದರು.