ಕಾಸರಗೋಡು: ಸೌರಯೋಜನೆ ಸಂಬಂಧ ವಿಚಾರ ಸಂಕಿರಣ ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿತು.
ಈ ಯೋಜನೆ ಸರಕಾರಿ ಕಚೇರಿಗಳಲ್ಲಿ, ಸ್ಥಳಿಯಾಡಳಿತ ಸಂಸ್ಥೆಗಳ ಕಚೇರಿಗಳಲ್ಲಿ ಅಳವಡಿಸುವ ನಿಟ್ಟಿನಲ್ಲಿ ಸರಕಾರಿ ನೌಕರರಿಗೆ, ಸ್ಥಳೀಯಾಡಳಿತ ಸಂಸ್ಥೆಗಳ ಸಿಬ್ಬಂದಿಗಳಿಗಾಗಿ ವಿಚಾರ ಸಂಕಿರಣ ನಡೆಯಿತು.
ಜಾಗತಿಕ ತಾಪ ಕಡಿತಗೊಳಿಸುವ ಕಾರ್ಯಕ್ರಮದ ಅಂಗವಾಗಿ ಸೌರಶಕ್ತಿ ಸುರಕ್ಷೆ ಖಚಿತಪಡಿಸುವ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಪುನರ್ ಬಳಕೆಯ ಸೌರಶಕ್ತಿ ಮೂಲಕ ವಿದ್ಯುತ್ ಉತ್ಪಾದನೆ ಹೆಚ್ಚಳಗೊಳ್ಳುತ್ತಿದೆ. ಇದರ ಅಂಗವಾಗಿ ಈ ಕಾರ್ಯಕ್ರಮವನ್ನು ಅತ್ಯುತ್ತಮರೀತಿ ಬಳಸುವ ರಾಜ್ಯದಲ್ಲಿ ವಿದ್ಯುತ್ ಮಂಡಳಿ ಜಾರಿಗೊಳಿಸುವ ಸೌರ ಯೋಜನೆಗೆ ಜಿಲ್ಲೆಯಲ್ಲಿ ಅತ್ಯುತ್ತಮ ಬೆಂಬಲ ಲಭಿಸಿದೆ. ಇದರ ಮೊದಲ ಹಂತವಾಗಿ ಜಿಲ್ಲೆಯ ಎಲ್ಲ ಸರಕಾರಿ ಸಂಸ್ಥೆಗಳಲ್ಲಿ, ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಸೌರಯೋಜನೆ ಜಾರಿಗೊಳಿಸಲು ಕೆ.ಎಸ್.ಇ.ಬಿ.ನಿರ್ಧರಿಸಿದೆ ಎಂದು ವಿಚಾರ ಸಂಕಿರಣ ತಿಳಿಸಿದೆ.
ಹೆಚ್ಚುವರಿ ದಂಡನಧಿಕಾರಿ ಎನ್.ದೇವಿದಾಸ್ ವಿಚಾರಸಂಕಿರಣ ಉದ್ಘಾಟಿಸಿದರು. ಜಿಲ್ಲಾ ಯೋಜನಾಧಿಕಾರಿ ಸತ್ಯಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಮತ್ತು ಕಾಞÂಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಎಂ.ಗೌರಿ ಮುಖ್ಯ ಅತಿಥಿಯಾಗಿದ್ದರು. ಸೋಲಾರ್ ಸಂಚಾಲಕ ಪಿ.ಜಯಪ್ರಕಾಶ್ ಪ್ರಬಂಧ ಮಂಡಿಸಿದರು. ಪಿ.ಸೀತಾರಾಮನ್, ಕೆ.ಶ್ರೀಧರನ್ ಮೊದಲಾದವರು ಉಪಸ್ಥಿತರಿದ್ದರು.
ಯೋಜನೆ ಆಡಳಿತೆ ಕಾರ್ಯಕಾರಿ ಅಭಿಯಂತರ ಪಿ.ಸುರೇಂದ್ರ ಸ್ವಾಗತಿಸಿ, ವಿದ್ಯುತ್ ವಿಭಾಗ ವಲಯ ಸಹಾಯಕ ಪ್ರಧಾನ ಅಭಿಯಂತರ ಜಿ.ಸುಧೀರ್ ವರದಿ ವಾಚಿಸಿದರು. ಸಹಾಯಕ ಕಾರ್ಯಕಾರಿ ಅಭಿಯಂತರ ಕೆ.ನಾಗರಾಜ ಭಟ್ ವಂದಿಸಿದರು.