ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನ ಪಾರ್ಕ್ ಕಾರ್ಯಾಗಾರವು ಕೊಡ್ಲಮೊಗರು ಶ್ರೀ ವಾಣೀವಿಜಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಜರಗಿತು. ಈ ಸಂದರ್ಭ ಉಪಜಿಲ್ಲಾ ಮಟ್ಟದ ವಿಜ್ಞಾನ ಪಾರ್ಕ್ ಉದ್ಘಾಟನೆಯೂ ನಡೆಯಿತು.
ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಅಂಗವಾಗಿ ಸರಕಾರವು ಶಿಕ್ಷಣ ರಂಗದಲ್ಲಿ ಹಲವಾರು ಬದಲಾವಣೆಗಳನ್ನು ತಂದಿದೆ. ಮಕ್ಕಳ ಕಲಿಕಾ ಮಟ್ಟವನ್ನು ಉತ್ತಮಗೊಳಿಸುವುದಕ್ಕಾಗಿ ಶಾಲೆಗಳಲ್ಲಿ ವಿವಿಧ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ. ಅವುಗಳಲ್ಲಿ ವಿಜ್ಞಾನ ಪಾರ್ಕ್ ಕೂಡಾ ಒಂದಾಗಿದೆ. ಮಕ್ಕಳಲ್ಲಿ ವಿಜ್ಞಾನ ಬಗೆಗಿನ ಆಸಕ್ತಿಯನ್ನು ಬೆಳೆಸುವುದು ಮತ್ತು ವೈಜ್ಞಾನಿಕ ಸತ್ಯಾಂಶಗಳನ್ನು ಸುಲಭವಾಗಿಯೂ ಅರ್ಥೈಸುವಂತೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ವಿಜ್ಞಾನ ಪಾರ್ಕ್ ಕಾರ್ಯಾಗಾರವನ್ನು ವಿಜ್ಞಾನ ಸಂಪನ್ಮೂಲ ವ್ಯಕ್ತಿ ಪೆÇ್ರ.ದಾಸಪ್ಪ ಬಲೂರಗಿ ನಡೆಸಿಕೊಟ್ಟರು. ಉಪಜಿಲ್ಲಾ ವಿಜ್ಞಾನ ಶಿಕ್ಷಕರಾದ ಸುಖೇಶ್, ಮುರಳಿ, ರಾಜೇಶ್ ಕಾರಂತ, ಹರಿದಾಸ ಮತ್ತು ಇಬ್ರಾಹಿಂ ಮುಂತಾದ ಸಂಪನ್ಮೂಲ ವ್ಯಕ್ತಿಗಳು ಸಹಕರಿಸಿದರು. ವಿಜ್ಞಾನ ಪಾಠಕ್ಕೆ ಸಂಬಂಧಿಸಿ ತರಗತಿಯಲ್ಲಿ ಮಕ್ಕಳ ಮಟ್ಟವನ್ನು ಉತ್ತಮಗೊಳಿಸಲು ಸಹಕಾರಿಯಾಗುವ ಸುಮಾರು 60 ರಷ್ಟು ಕಲಿಕೋಪಕರಣಗಳನ್ನೂ, ಮಾದರಿಗಳನ್ನೂ ಪರಿಚಯಿಸುತ್ತಾ ತರಗತಿ ನಡೆಯಿತು. ಈ ತರಬೇತಿಯಲ್ಲಿ ಹಲವು ಶಾಲೆಗಳ ಶಿಕ್ಷಕರು ಭಾಗವಹಿಸಿ ಪ್ರಯೋಜನ ಪಡೆದರು.
ವಿಜ್ಞಾನ ಪಾರ್ಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ ವರ್ಕಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಅಬ್ದುಲ್ ಮಜೀದ್ ಅಧ್ಯಕ್ಷತೆ ವಹಿಸಿದರು. ವೈಜ್ಞಾನಿಕ ಪ್ರಯೋಗದ ಮೂಲಕ ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿ ಶುಭಹಾರೈಸಿದರು. ಮಂಜೇಶ್ವರ ಬಿಆರ್‍ಸಿ ತರಬೇತುದಾರರಾದ ಗುರುಪ್ರಸಾದ್ ರೈ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವೇದಿಕೆಯಲ್ಲಿ ವರ್ಕಾಡಿ ಗ್ರಾ.ಪಂ. ಸದಸ್ಯ ಗೋಪಾಲಕೃಷ್ಣ ಪಜ್ವ, ಬ್ಲಾಕ್ ಪಂಚಾಯತಿ ಸದಸ್ಯ ಸದಾಶಿವ ವಿ, ವರ್ಕಾಡಿ ಪಿಇಸಿ ಕಾರ್ಯದರ್ಶಿ ಸುರೇಶ್ ಬಂಗೇರ, ಮಂಜೇಶ್ವರ ಶಿಕ್ಷಣ ಉಪನಿರ್ದೇಶಕ ದಿನೇಶ್ ವಿ, ಮಂಜೇಶ್ವರ ಕ್ಷೇತ್ರ ನಿರೂಪಣಾಧಿಕಾರಿ ವಿಜಯ ಕುಮಾರ್ ಪಾವಳ, ಡಯಟ್ ಮಾಯಿಪ್ಪಾಡಿಯ ಶಿಕ್ಷಕ ತರಬೇತುದಾರ ಶಶಿಧರ, ಮೂಡಂಬೈಲು ಮುಖ್ಯ ಶಿಕ್ಷಕ ಇಬ್ರಾಹಿಂ, ಶಿರಿಯ ಶಾಲಾ ಮುಖ್ಯ ಶಿಕ್ಷಕಿ ಗೀತಾ ಟೀಚರ್, ಶಾಲಾ ಪ್ರಬಂಧಕಿ ಅನುಸೂಯ ದೇವಿ ಮತ್ತು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಸ್ಮಾಯಿಲ್ ಕಾಂತಮಜಲ್ ಶುಭಹಾರೈಸಿದರು.
ಅಧ್ಯಾಪಿಕೆ ಜ್ಯೋತಿ ಲಕ್ಷ್ಮೀ ಪ್ರಾರ್ಥನೆ ಹಾಡಿದರು. ಶಾಲಾ ಮುಖ್ಯ ಶಿಕ್ಷಕಿ ಪದ್ಮನಯನ ಎನ್.ಕೆ. ಸ್ವಾಗತಿಸಿ, ಅಧ್ಯಾಪಿಕೆ ಸರಳ ಕುಮಾರಿ ವಂದಿಸಿದರು. ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.