ಕಾಸರಗೋಡು: ಪಾರೆಕಟ್ಟೆ ಮಡಪ್ಪುರ ಶ್ರೀ ಮುತ್ತಪ್ಪ ಕ್ಷೇತ್ರದ ಪ್ರತಿಷ್ಠಾ ಕಲಶೋತ್ಸವದ 11ನೇ ವಾರ್ಷಿಕೋತ್ಸವದ ಅಂಗವಾಗಿ ಜ.27ರಂದು ನಾಗಪ್ರತಿಷ್ಠೆ ದಿನಾಚರಣೆ, ಜ.28 ಮತ್ತು ಜ.29ರಂದು ಮುತ್ತಪ್ಪ ತಿರುವಪ್ಪ ಪ್ರತಿಷ್ಠಾ ದಿನಾಚರಣೆ ಹಾಗೂ ಫೆ.2ರಂದು ವಾರ್ಷಿಕ ಭಜನಾ ಕಾರ್ಯಕ್ರಮವು ಜರಗಲಿದೆ.
ಜ.26ರಂದು ಸಂಜೆ 6.30ಕ್ಕೆ ಪಾರೆಕಟ್ಟೆ ಗುಡ್ಡೆಮನೆ ಶ್ರೀ ವಿಷ್ಣುಮೂರ್ತಿ ಕ್ಷೇತ್ರದಿಂದ ಶ್ರೀ ಮುತ್ತಪ್ಪ ಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, 6.50ಕ್ಕೆ ಉಗ್ರಾಣ ಮುಹೂರ್ತ, ಜ.27ರಂದು ಬೆಳಿಗ್ಗೆ 8ಕ್ಕೆ ನಾಗದೇವರಿಗೆ ಪಂಚಾಮೃತ ಅಭಿಷೇಕ, ನಾಗತಂಬಿಲ, ಪ್ರಸಾದ ವಿತರಣೆ, 10ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಂಜೆ 6.28ಕ್ಕೆ ದೀಪಾರಾಧನೆ, 6.30ಕ್ಕೆ ನೃತ್ಯ ಕಾರ್ಯಕ್ರಮಗಳು ಜರಗಲಿವೆ.
ಜ.28ರಂದು ಬೆಳಿಗ್ಗೆ 10ಕ್ಕೆ ಭಜನಾ ಕಾರ್ಯಕ್ರಮ, ಮಧ್ಯಾಹ್ನ 12ಕ್ಕೆ ವಾರ್ಷಿಕ ಪೈಂಗುಟ್ಟಿ, ಪ್ರಸಾದ ವಿತರಣೆ, ಮಧ್ಯಾಹ್ನ 1ಗಂಟೆಗೆ ಅನ್ನ ಪ್ರಸಾದ ವಿತರಣೆ, ಸಂಜೆ 4ಕ್ಕೆ ಕಲಶ ತಟ್ಟಿನ ಮುಹೂರ್ತ, 6.30ಕ್ಕೆ ದೀಪಾರಾಧನೆ, ಶ್ರೀ ಮುತ್ತಪ್ಪ ದೈವದ ಕೋಲ, ರಾತ್ರಿ 10ಗಂಟೆಗೆ ಶ್ರೀ ಮುತ್ತಪ್ಪನ್ ದೈವದ ಕಳಿಗಪ್ಪಾಟ್, 11ರಿಂದ ತಿರುವಪ್ಪ ದೈವವನ್ನು ಮಲೆ ಇಳಿಸುವುದು, ಜ.29ರಂದು ಬೆಳಿಗ್ಗೆ 7ಕ್ಕೆ ಕಲಶ ಮೆರವಣಿಗೆ, 10ಕ್ಕೆ ಸುಡುಮದ್ದು ಸೇವೆ, 11ಕ್ಕೆ ನೃತ್ಯ ಕಾರ್ಯಕ್ರಮ, ಮಧ್ಯಾಹ್ನ 1 ಗಂಟೆಗೆ ಅನ್ನಪ್ರಸಾದ ವಿತರಣೆ ನೆರವೇರಲಿದೆ.
ಫೆ.2ರಂದು ಸಂಜೆ 6.30ಕ್ಕೆ ದೀಪಾರಾಧನೆ, 6.3ಕ್ಕೆ ದೀಪಪ್ರತಿಷ್ಠೆ , ವಾರ್ಷಿಕ ಭಜನಾ ಕಾರ್ಯಕ್ರಮ ಆರಂಭ, ರಾತ್ರಿ 8ಕ್ಕೆ ವಾರದ ಪೈಂಗುಟ್ಟಿ , ಪ್ರಸಾದ ವಿತರಣೆ, ರಾತ್ರಿ 11ಕ್ಕೆ ಮಹಾಪೂಜೆ, ದೀಪ ವಿಸರ್ಜನೆ ಮುಂತಾದ ಕಾರ್ಯಕ್ರಮ ನಡೆಯಲಿದೆ.